ಗ್ರೇಟರ್ ನೋಯ್ಡಾ:ತಂದೆಯೊಬ್ಬ ಕ್ಷುಲ್ಲಕ ಕಾರಣಕ್ಕೆ ತನ್ನದೇ ಮೂರು ವರ್ಷದ ಮಗುವಿನ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿಗೆ ಸಮೀಪವಿರುವ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.
ಮಗು ಆಟವಾಡಲು ತಂದೆಯ ಮೊಬೈಲ್ನ್ನು ತೆಗೆದುಕೊಂಡಿದೆ. ಇಷ್ಟಕ್ಕೆ ಸಿಟ್ಟಾದ ತಂದೆ ಮೊಬೈಲ್ ಚಾರ್ಜ್ರ್ನಿಂದ ಮಗುವಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಇದರಿಂದ ಮಗುವಿನ ದೇಹದಲ್ಲಿ ಬಾಸುಂಡೆ ಎದ್ದಿದೆ. ಅಲ್ಲದೇ ಮಗುವನ್ನು ಥಳಿಸಿದ್ದಕ್ಕೆ ಪತ್ನಿ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪತ್ನಿಯ ಮೇಲೆಯೂ ದುರುಳ ಪತಿ ಹಲ್ಲೆ ಮಾಡಿದ್ದಾನೆ. ಇದರಿಂದ ಕಂಗೆಟ್ಟ ಪತ್ನಿ ಮುನೇಜಾ, ಪೊಲೀಸರಿಗೆ ದೂರು ನೀಡಿದ್ದಾಳೆ.