ಕರ್ನಾಟಕ

karnataka

ETV Bharat / bharat

ಎರಡು ಕೋಟಿ ಬಳಕೆದಾರರ ದಾಟಿದ ಫಾಸ್ಟ್​ಟ್ಯಾಗ್​​: ಇಲ್ಲಿದೆ ಕಾರಣ..

ಕೊರೊನಾ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ನಿಯಮವೂ ಅನಿವಾರ್ಯವಾಗುತ್ತಿರುವ ಕಾರಣದಿಂದ ಫಾಸ್ಟ್​ಟ್ಯಾಗ್ ಬಳಕೆಯಲ್ಲಿ ಸ್ವಲ್ಪ ಮಟ್ಟಿಗಿನ ಹೆಚ್ಚಳಕ್ಕೆ ಕಾರಣವಾಗಿದೆ.

FASTag
ಫಾಸ್ಟ್​ಟ್ಯಾಗ್

By

Published : Nov 11, 2020, 8:34 PM IST

ನವದೆಹಲಿ: ದೇಶದಲ್ಲಿ ಫಾಸ್ಟ್‌ಟ್ಯಾಗ್ ಬಳಕೆದಾರರ ಸಂಖ್ಯೆ ಈ ವರ್ಷ ಶೇಕಡಾ 400ರಷ್ಟು ಬೆಳವಣಿಗೆ ಕಂಡಿದ್ದು, ಈಗ ಒಟ್ಟು ಎರಡು ಕೋಟಿ ಮಂದಿ ಫಾಸ್ಟ್​ಟ್ಯಾಗ್​ ಅನ್ನು ಬಳಸುತ್ತಿದ್ದಾರೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಬುಧವಾರ ಮಾಹಿತಿ ನೀಡಿದೆ.

ದೇಶದಲ್ಲಿ ಫಾಸ್ಟ್​ಟ್ಯಾಗ್ ಬಳಕೆದಾರರು ದಿನೇ ದಿನೇ ಏರಿಕೆಯಾಗುತ್ತಿದ್ದು, ಇದರಿಂದ ಒಟ್ಟು ಟೋಲ್ ಸಂಗ್ರಹ ದಿನಕ್ಕೆ 92 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಒಂದು ವರ್ಷದ ಹಿಂದೆ ಟೋಲ್​ ಸಂಗ್ರಹ 70 ಕೋಟಿ ರೂಪಾಯಿ ಇತ್ತು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸ್ಪಷ್ಟನೆ ನೀಡಿದೆ.

ಈಗಿನ ಪ್ರಸ್ತುತ ಅಂಕಿ ಅಂಶಗಳ ಪ್ರಕಾರ ಒಟ್ಟು ಟೋಲ್ ಸಂಗ್ರಹದ ಶೇಕಡಾ 75ರಷ್ಟು ಫಾಸ್ಟ್​ಟ್ಯಾಗ್​ನಿಂದಲೇ ಬರುತ್ತಿದೆ. ಟೋಲ್​ಗೇಟ್​​ಗಳಲ್ಲಿ ವಾಹನಗಳ ದಟ್ಟಣೆ ತಪ್ಪಿಸಲು, ಟೋಲ್ ಸಂಗ್ರಹಣೆಯ ವೇಗ ಹೆಚ್ಚಿಸುವ ಸಲುವಾಗಿ ನಗದು ರಹಿತ ವಹಿವಾಟಿಗಾಗಿ ಫಾಸ್ಟ್​ ಟ್ಯಾಗ್ ಅನ್ನು ಜಾರಿಗೊಳಿಸಲಾಗಿತ್ತು.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶೇಕಡಾ ನೂರರಷ್ಟು ನಗದು ರಹಿತ ವಹಿವಾಟಿನತ್ತ ಗಮನ ಹರಿಸಲು ಪಾಸ್ಟ್​ಟ್ಯಾಗ್​ ಅನ್ನು ಅಳವಡಿಸಿಕೊಳ್ಳಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಹೆದ್ದಾರಿಗಳ ಪ್ರಯಾಣಿಕರ ಸಹಕಾರದಿಂದಾಗಿ ಫಾಸ್ಟ್​ಟ್ಯಾಗ್ ಬಳಕೆದಾರರಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ಎನ್‌ಎಚ್‌ಎಐ ಅಭಿಪ್ರಾಯಪಟ್ಟಿದೆ.

ಕೊರೊನಾ ಸೋಂಕಿನ ಕಾರಣಕ್ಕೆ ಇತ್ತೀಚೆಗೆ ಸಾಮಾಜಿಕ ಅಂತರವೂ ಕೂಡಾ ಅವಶ್ಯಕತೆ ಇರುವ ಕಾರಣದಿಂದ ಟೋಲ್​ ಫ್ಲಾಜಾಗಳಲ್ಲಿ ಫಾಸ್ಟ್​ಟ್ಯಾಗ್ ಬಳಕೆಗೆ ಮತ್ತಷ್ಟು ಉತ್ತೇಜನ ದೊರೆತಿದೆ. ಟೋಲ್ ಆಪರೇಟರ್​ಗಳು ಹಾಗೂ ವಾಹನ ಚಾಲಕರ ನಡುವೆ ಸುರಕ್ಷಿತ ಭಾವ ಒದಗಿಸುತ್ತಿದೆ.

ABOUT THE AUTHOR

...view details