ನವದೆಹಲಿ:ಕೇಂದ್ರ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರಿಗೆ ಹಾಗೂ ಜನತೆಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಕರ ಸಂಕ್ರಮಣದ ಶುಭಾಶಯ ಕೋರಿದ್ದಾರೆ.
ರೈತರು ಪ್ರಬಲ ಶಕ್ತಿಗಳ ವಿರುದ್ಧ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ: ರಾಹುಲ್ ಗಾಂಧಿ - ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರು
ಮಕರ ಸಂಕ್ರಮಣದ ಶುಭಾಶಯ ಕೋರಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ರೈತರು ವಿಶೇಷವಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
rahul gandhi
ಮೂರು ಕೃಷಿ ಕಾನೂನುಗಳ ವಿರುದ್ಧ ದೆಹಲಿ ಗಡಿಯಲ್ಲಿ ಆಂದೋಲನ ನಡೆಸುತ್ತಿರುವ ರೈತರಿಗೆ ರಾಹುಲ್ ವಿಶೇಷ ಶುಭಾಶಯಗಳನ್ನು ಅರ್ಪಿಸಿ, "ನಮ್ಮ ಕೃಷಿಕರು ಪ್ರಬಲ ಶಕ್ತಿಗಳ ವಿರುದ್ಧ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ" ಎಂದು ಹೇಳಿದ್ದಾರೆ.
"ಸಂಕ್ರಾಂತಿ ಸಂತೋಷ ಮತ್ತು ಸಂಭ್ರಮಾಚರಣೆಯ ಸಮಯವಾಗಿದೆ. ಮಕರ ಸಂಕ್ರಾಂತಿ, ಪೊಂಗಲ್, ಬಿಹು, ಭೋಗಿ ಮತ್ತು ಉತ್ತರಾಯಣದ ಶುಭಾಶಯಗಳು. ಕೃಷಿಕರಿಗೆ ವಿಶೇಷ ಪ್ರಾರ್ಥನೆ ಮತ್ತು ಶುಭಾಶಯಗಳು" ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.