ಕರ್ನಾಟಕ

karnataka

ETV Bharat / bharat

ನಾಲ್ವರು ಬಾಂಗ್ಲ ವಲಸಿಗರ ಬಂಧನ; ನಕಲಿ ಸೌದಿ ಅರೇಬಿಯನ್ ರಿಯಾಲ್ ವಶ... - ಅಸಾದ್ ಉಜ್ಜಾಮಾನ್

ಭಾರತೀಯ ಕರೆನ್ಸಿಯಲ್ಲಿ ರೂ, 2 ಲಕ್ಷ ಮೌಲ್ಯದ ನಕಲಿ ಸೌದಿ ಅರೇಬಿಯನ್ ರಿಯಾಲ್ ಗಳನ್ನು ವಶಪಡಿಸಿಕೊಂಡಿರುವ ಜಿಲ್ಲಾ ಪೋಲಿಸರು ನಾಲ್ಕು ಆರೋಪಿಗಳನ್ನು ವಶಕ್ಕೆ ಪಡೆದಿರುವ ಘಟನೆ ಅಸ್ಸಾಂ ನಲ್ಲಿ ನಡೆದಿದೆ.

ನಾಲ್ವರು ಬಾಂಗ್ಲಾರ ಬಂಧನ; ನಕಲಿ ಸೌದಿ ಅರೇಬಿಯನ್ ರಿಯಾಲ್ ವಶ

By

Published : Sep 9, 2019, 6:36 AM IST

Updated : Sep 10, 2019, 1:30 AM IST

ಭುವನೇಶ್ವರ;ಭಾರತೀಯ ಕರೆನ್ಸಿಯಲ್ಲಿ ರೂ, 2 ಲಕ್ಷ ಮೌಲ್ಯದ ನಕಲಿ ಸೌದಿ ಅರೇಬಿಯನ್ ರಿಯಾಲ್ಸ್​ಗಳನ್ನು ವಶಪಡಿಸಿಕೊಂಡಿರುವ ಜಿಲ್ಲಾ ಪೋಲಿಸರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.

ಹಾಗೆಯೇ ಆರೋಪಿಗಳಿಂದ ಆರು ಮೊಬೈಲ್ ಫೋನ್ ಮತ್ತು ಐದು ಬಾಂಗ್ಲಾದೇಶದ ಪಾಸ್ ಪೊರ್ಟ್​ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಲ್ಚಾರ್​ನಲ್ಲಿ ಪೋಲಿಸರು ದಾಳಿ ನಡೆಸಿ, ನಾಲ್ವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಎಂ. ಡಿ ರಿಪ್ಪನ್ ಖಾನ್, ಎಂ,ಡಿ , ಕಬೀರ್ ಸರ್ದಾರ್, ಅಸಾದ್ ಉಜ್ಜಾಮಾನ್ ,ಮತ್ತು ಜಮಾಲ್ ಮುನ್ಶಿ ಎಂದು ಗುರುತಿಸಲಾಗಿದೆ.

ಈಗಾಗಲೇ ಆರೋಪಿಗಳು ಕಳೆದ ತಿಂಗಳಿನಲ್ಲಿ ವ್ಯಕ್ತಿಯೊಬ್ಬನಿಗೆ ಮೋಸ ಮಾಡಿದ್ದ ಆರೋಪ ಕೇಳಿಬಂದಿತ್ತು. ಇದೀಗ ಮತ್ತೆ ಒಬ್ಬರಿಗೆ ನಕಲಿ ರಿಯಾಲ್ಸ್​ಗಳನ್ನು ಭಾರತದ 2 ಲಕ್ಷರೂ ಕರೆನ್ಸಿಗೆ ವಿನಿಮಯ ಮಾಡಿ ಮೋಸಗೊಳಿಸಲು ಪ್ರಯತ್ನಿಸಿದ್ದರು ಎಂದು ತಿಳಿದುಬಂದಿದೆ.

Last Updated : Sep 10, 2019, 1:30 AM IST

ABOUT THE AUTHOR

...view details