ಗುವಾಹಟಿ:ನಕಲಿ ನೋಟುಗಳನ್ನು ಮುದ್ರಿಸಿದ ಆರೋಪದಲ್ಲಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಅಸ್ಸೋಂ ಪೊಲೀಸರು ತಿಳಿಸಿದ್ದಾರೆ.
ನಕಲಿ ನೋಟು ಮುದ್ರಣ ಆರೋಪ: ನಾಲ್ವರು ಆರೋಪಿಗಳ ಬಂಧನ - ಅಸ್ಸೋಂನಲ್ಲಿ ನಾಲ್ವರು ಆರೋಪಿಗಳ ಬಂಧನ
ನಕಲಿ ನೋಟುಗಳನ್ನು ಮುದ್ರಿಸುತಿದ್ದ ಆರೋಪದಲ್ಲಿ ನಾಲ್ವರನ್ನು ಬಂಧಿಸಲಾಗಿದ್ದು, ನೋಟುಗಳನ್ನು ಮುದ್ರಿಸಲು ಬಳಸುವ ಯಂತ್ರ, ಎಟಿಎಂ ಕಾರ್ಡ್‌ಗಳು ಹಾಗೂ ಫೋನ್ಗಳನ್ನು ವಶಕ್ಕೆ ಪಡೆಯಲಾಗಿದೆ.
ನಕಲಿ ನೋಟು ಮುದ್ರಣ ಆರೋಪ
ಬಂಧಿತರಿಂದ ಮುದ್ರಣ ಯಂತ್ರ, ಎಟಿಎಂ ಕಾರ್ಡ್‌ಗಳು, ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್ ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಇಸ್ಲಾಂಪುರದ ನಿಜಾಮ್ ಉದ್ದೀನ್, ಹಮೀದ್ ಅಲಿ, ನಜ್ರುಲ್ ಹುಸೇನ್ ಮತ್ತು ಅಹಮದ್ಪುರ ಮೂಲದ ಅಫ್ಜಲೂರು ರಹಮಾನ್ ಎಂದು ಗುರುತಿಸಲಾಗಿದೆ.
"ನಕಲಿ ನೋಟುಗಳ ಕಟ್ಟುಗಳು, ನೋಟುಗಳನ್ನು ಮುದ್ರಿಸಲು ಬಳಸುವ ಯಂತ್ರ, ಎಟಿಎಂ ಕಾರ್ಡ್‌ಗಳು, 14 ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್ ವಶಪಡಿಸಿಕೊಳ್ಳಲಾಗಿದೆ. ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ" ಎಂದು ಪೊಲೀಸರು ತಿಳಿಸಿದ್ದಾರೆ.