ಕರ್ನಾಟಕ

karnataka

ETV Bharat / bharat

ಆನ್‌ಲೈನ್ ಮೂಲಕ ಶೈಕ್ಷಣಿಕ ಸಮುದಾಯಗಳಿಗಾಗಿ ಸಂಪನ್ಮೂಲ ಮಾರ್ಗದರ್ಶಿ ಆರಂಭಿಸಿದ ಎಫ್​ಬಿ - ಫೇಸ್‌ಬುಕ್ ಸಂಪನ್ಮೂಲ ಮಾರ್ಗದರ್ಶಿ

ಫೇಸ್‌ಬುಕ್ ಉತ್ಪನ್ನಗಳು, ಪರಿಕರಗಳು ಮತ್ತು ಕಾರ್ಯಕ್ರಮಗಳನ್ನು ಬಳಸಿಕೊಂಡು ಕಲಿಕೆಯ ಪ್ರಕ್ರಿಯೆಗೆ ಹೇಗೆ ಸಹಕರಿಸುವುದು ಮತ್ತು ಮುಂದುವರಿಸುವುದು ಎಂಬುದರ ಕುರಿತು ಶೈಕ್ಷಣಿಕ ಸಮುದಾಯಗಳಿಗಾಗಿ ಫೇಸ್‌ಬುಕ್ ಈಗ ಆನ್‌ಲೈನ್ ಸಂಪನ್ಮೂಲ ಮಾರ್ಗದರ್ಶಿಯನ್ನು ಪ್ರಾರಂಭಿಸಿದೆ.

Facebook launches online resource guide for educational communities
ಫೇಸ್‌ಬುಕ್ ಈಗ ಆನ್‌ಲೈನ್ ಮೂಲಕ ಶೈಕ್ಷಣಿಕ ಸಮುದಾಯಗಳಿಗಾಗಿ ಸಂಪನ್ಮೂಲ ಮಾರ್ಗದರ್ಶಿ ಪ್ರಾರಂಭಿಸಿದೆ

By

Published : Apr 15, 2020, 3:47 PM IST

ಫೇಸ್‌ಬುಕ್ ಉತ್ಪನ್ನಗಳು, ಪರಿಕರಗಳು ಮತ್ತು ಕಾರ್ಯಕ್ರಮಗಳನ್ನು ಬಳಸಿಕೊಂಡು ಕಲಿಕೆಯ ಪ್ರಕ್ರಿಯೆಗೆ ಹೇಗೆ ಸಹಕರಿಸುವುದು ಮತ್ತು ಮುಂದುವರಿಸುವುದು ಎಂಬುದರ ಕುರಿತು ಶೈಕ್ಷಣಿಕ ಸಮುದಾಯಗಳಿಗಾಗಿ ಫೇಸ್‌ಬುಕ್ ಈಗ ಆನ್‌ಲೈನ್ ಸಂಪನ್ಮೂಲ ಮಾರ್ಗದರ್ಶಿಯನ್ನು ಪ್ರಾರಂಭಿಸಿದೆ. ಮತ್ತು ಅಧಿಕೃತ ಮೂಲಗಳಿಂದ ಕೋವಿಡ್​-19 ಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುತ್ತದೆ. ಪ್ರಸ್ತುತ, ಮಾರ್ಗದರ್ಶಿ ಇಂಗ್ಲಿಷ್, ಹಿಂದಿ, ಮರಾಠಿ, ಗುಜರಾತಿ ಮತ್ತು ಕನ್ನಡ ಭಾಷೆಗಳಲ್ಲಿ ಲಭ್ಯವಿದೆ.

ಅಧಿಕೃತ ಮೂಲಗಳಿಂದ ಕೋವಿಡ್​-19 ಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುವಾಗ ಫೇಸ್‌ಬುಕ್ ಉತ್ಪನ್ನಗಳು, ಪರಿಕರಗಳು ಮತ್ತು ಕಾರ್ಯಕ್ರಮಗಳನ್ನು ಬಳಸಿಕೊಂಡು ಕಲಿಕೆಯ ಪ್ರಕ್ರಿಯೆಗೆ ಹೇಗೆ ಸಹಕರಿಸಬೇಕು ಮತ್ತು ಮುಂದುವರಿಸಬೇಕು ಎಂಬುದರ ಕುರಿತು ಶೈಕ್ಷಣಿಕ ಸಮುದಾಯಗಳಿಗಾಗಿ ಫೇಸ್‌ಬುಕ್ ಈ ಆನ್‌ಲೈನ್ ಸಂಪನ್ಮೂಲ ಮಾರ್ಗದರ್ಶಿಯನ್ನು ಪ್ರಾರಂಭಿಸಿದೆ.

ಪ್ರಸ್ತುತ, ಮಾರ್ಗದರ್ಶಿಯ ಮೊದಲ ಹಂತದಲ್ಲಿ ಫೇಸ್‌ಬುಕ್ ಯುನೆಸ್ಕೋದೊಂದಿಗೆ ಪಾಲುದಾರಿಕೆ ಹೊಂದಿದೆ. ಈ ಮಾರ್ಗದರ್ಶಿ ಭಾರತದಾದ್ಯಂತದ ಕಲಿಯುವವರು, ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಕರನ್ನು ತಲುಪುವುದನ್ನು ಖಾತ್ರಿಪಡಿಸಿಕೊಳ್ಳುವುದರ ಜೊತೆಗೆ ಸಂಬಂಧಿತ ಕಲಿಕಾ ಸಂಪನ್ಮೂಲಗಳೊಂದಿಗೆ ಮಾರ್ಗದರ್ಶಿ ನವೀಕರಣ ಮತ್ತು ಸಂರಕ್ಷಣೆಯನ್ನು ಬೆಂಬಲಿಸುತ್ತದೆ.

ಜೊತೆಗೆ, ಇದು ಫೇಸ್‌ಬುಕ್‌ನ ಡಿಜಿಟಲ್ ಸಾಕ್ಷರತಾ ಕಾರ್ಯಕ್ರಮದಿಂದ ಮಾಡ್ಯೂಲ್‌ಗಳನ್ನು ಹೊಂದಿದೆ - ಜನರು ಚಿಂತನಶೀಲವಾಗಿ ಯೋಚಿಸಲು ಮತ್ತು ಆನಲೈನ್​ ನಲ್ಲಿ ಹಂಚಿಕೊಳ್ಳಲು "ವಿ ಥಿಂಕ್ ಡಿಜಿಟಲ್" ಸಹಾಯ ಪಡೆಯಬಹುದಾಗಿದೆ. "ನಮ್ಮ ಆನ್‌ಲೈನ್ ಕಲಿಕಾ ಸಂಪನ್ಮೂಲ ಮಾರ್ಗದರ್ಶಿ" ಮೂಲಕ ಶಿಕ್ಷಕರು, ಪೋಷಕರು ಮತ್ತು ಸಂಬಂಧಿತ ಸರ್ಕಾರಿ ಅಧಿಕಾರಿಗಳನ್ನು ಸಾಕಷ್ಟು ಸಂಪನ್ಮೂಲಗಳು ಮತ್ತು ಸಾಧನಗಳೊಂದಿಗೆ ಸಜ್ಜುಗೊಳಿಸಲು ನಾವು ಬಯಸುತ್ತೇವೆ ಮತ್ತು ದೂರದ ಕಲಿಕೆಗೆ ಅನುಕೂಲವಾಗುವಂತೆ ಸಂಪರ್ಕದಲ್ಲಿರಲು ಮತ್ತು ಡಿಜಿಟಲ್‌ನಲ್ಲಿ ಸಹಕರಿಸಲು ಸಹಾಯ ಮಾಡಲು ನಾವು ಬಯಸುತ್ತೇವೆ" ಎಂದು ಫೇಸ್‌ಬುಕ್ ಇಂಡಿಯಾದ ನಿರ್ದೇಶಕ ಮತ್ತು ಪಾಲುದಾರಿಕೆಗಳ ಮುಖ್ಯಸ್ಥ ಮನೀಶ್ ಚೋಪ್ರಾ ತಿಳಿಸಿದ್ದಾರೆ.

ABOUT THE AUTHOR

...view details