ಸ್ಯಾನ್ಫ್ರಾನ್ಸಿಸ್ಕೋ( ಅಮೆರಿಕ): ಹೊಸ ಹೊಸ ಸೇವೆಗಳ ಮೂಲಕ ಇಡೀ ಗ್ರಾಹಕರನ್ನು ತನ್ನತ್ತ ಸೆಳೆದುಕೊಂಡಿರುವ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಇದೀಗ ಮೆಸೆಂಜರ್‌ನಲ್ಲಿ ಉಚಿತವಾಗಿ ವಿಡಿಯೋ ಕಾಲ್ ಸೌಲಭ್ಯವನ್ನು ಒದಗಿಸಿದೆ. ಜಗತ್ತಿನ ಯಾವುದೇ ಮೂಲೆಯಿಂದ ಒಮ್ಮೆಗೆ 50 ಮಂದಿ ವಿಡಿಯೋ ಕಾಲ್‌ನಲ್ಲಿ ಮಾತನಾಡುವ ಅವಕಾಶ ಮೆಸೆಂಜರ್‌ನಲ್ಲಿ ಕಲ್ಪಿಸಲಾಗಿದೆ.
ಮೆಸೆಂಜರ್‌ನಲ್ಲಿ ಇನ್ಮುಂದೆ ವಿಡಿಯೋ ಚಾಟಿಂಗ್ಗೆ ಅವಕಾಶ - ಮೆಸೆಂಜರ್‌ನಲ್ಲಿ ಉಚಿತವಾಗಿ ವಿಡಿಯೋ ಕಾಲ್ ಸೌಲಭ್ಯ
ಸಾಮಾಜಿಕ ಜಾಲತಾಣ ಫೇಸ್‌ಬುಕ್ ಇದೀಗ ತನ್ನ ಮೆಸೆಂಜರ್‌ನಲ್ಲಿ ಉಚಿತವಾಗಿ ವಿಡಿಯೋ ಕಾಲ್ ಸೌಲಭ್ಯವನ್ನು ಒದಗಿಸಿದೆ. ಜಗತ್ತಿನ ಯಾವುದೇ ಮೂಲೆಯಿಂದ ಒಮ್ಮೆಗೆ 50 ಮಂದಿ ವಿಡಿಯೋ ಕಾಲ್‌ನಲ್ಲಿ ಮಾತನಾಡುವ ಅವಕಾಶ ಮೆಸೆಂಜರ್‌ನಲ್ಲಿ ಕಲ್ಪಿಸಿದೆ.
ಮೆಸೆಂಜರ್‌ನಲ್ಲಿ ಅಥವಾ ಫೇಸ್ಬುಕ್ನಲ್ಲಿ ನಿಮ್ಮದೇ ಆದಂತಹ ಗ್ರೂಪ್ ರಚಿಸಿ ಅದರ ಲಿಂಕ್ ಅನ್ನು ಶೇರ್ ಮಾಡುವ ಮೂಲಕ ಬೇರೆಯವರನ್ನ ಆಹ್ವಾನಿಸಬಹುದು. ಗ್ರೂಪ್ನಲ್ಲಿ ಸೇರಿದವರು ತಮಗೆ ಇಷ್ಟವಿಲ್ಲದಿದ್ದರೆ ಗ್ರೂಪ್ಗಳಿಂದ ಹೊರ ಹೋಗಬಹುದಾಗಿದೆ. ಈ ಗ್ರೂಪ್ಗಳಿಗೆ ನಿಮಗೆ ಇಷ್ಟವಾದವರನ್ನು ಸೇರಿಕೊಂಡು, ಬೇಡವಾದವರನ್ನು ಗ್ರೂಪ್ನಿಂದ ತೆಗೆದು ಹಾಕುವ ಅವಕಾಶವನ್ನು ಕಲ್ಪಿಸಲಾಗಿದೆ. ವಿಶೇಷ ಅಂದ್ರೆ ಫೇಸ್‌ಬುಕ್ ಖಾತೆ ಇಲ್ಲದವರು ಈ ಗ್ರೂಪ್‌ಗೆ ಸೇರಬಹುದು ಎಂದು ಮೆಸೆಂಜರ್‌ನ ಉಪಾಧ್ಯಕ್ಷ ಸ್ಟಾನ್ ಚುಡ್ನೋಸ್ಕಿ ವಿವರಿಸಿದ್ದಾರೆ.
ಗ್ರೂಪ್ನಲ್ಲಿರುವ ಯಾರು ಬೇಕಾದರೂ ಚಾಟಿಂಗ್ ರೂಮ್ಗಳನ್ನು ರಚಿಸಬಹುದು. ಅನಗತ್ಯವಾದ ವಿಡಿಯೋಗಳನ್ನು ಅಡ್ಮಿನ್ ತೆಗೆದು ಹಾಕುವ ಮೂಲಕ ಗ್ರೂಪ್ ಸುರಕ್ಷಿತವಾಗಿಟ್ಟುಕೊಳ್ಳಬಹುದು. ಜೂಮ್, ಗೂಗಲ್ ಮೀಟ್ ಮತ್ತು ಮೈಕ್ರೋಸಾಫ್ಟ್ ಟೀಮ್ಸ್ ಆ್ಯಪ್‌ನಲ್ಲಿ ಈ ಸೌಲಭ್ಯವಿತ್ತು.