ಕರ್ನಾಟಕ

karnataka

ETV Bharat / bharat

ಭಾರತೀಯ ಬಳಕೆದಾರರನ್ನು ಬ್ಲಾಕ್​ ಮಾಡಿದ ಫೇಸ್​ ಆ್ಯಪ್... ಎರರ್​ಗೆ ಕಾರಣ ಏನು? - ದೋಷ

ವೃದ್ಧಾಪ್ಯದ ಫಿಲ್ಟರ್​ಗಳೊಂದಿಗೆ ವೈರಲ್ ಆಗಿರುವ ಫೇಸ್​ಆ್ಯಪ್ ಬಳಕೆಯಲ್ಲಿ ಇದೀಗ ದೋಷ ಕಾಣಿಸುತ್ತಿದೆ.

Face app

By

Published : Jul 19, 2019, 10:39 AM IST

ಮುದುಕ ಮುದುಕಿಯರ ಫಿಲ್ಟರ್​ಗಳೊಂದಿಗೆ ವೈರಲ್ ಆಗಿರುವ ಫೇಸ್​ಆ್ಯಪ್ ಇದೀಗ ಭಾರತದ ಬಳಕೆದಾರರನ್ನು ಬ್ಲಾಕ್ ಮಾಡುತ್ತಿದೆ. ಆ್ಯಂಡ್ರಾಯ್ಡ್​ನ ಗೂಗಲ್ ಪ್ಲೇ ಮತ್ತು ಐಒಎಸ್​ನ ಆ್ಯಪಲ್ ಪ್ಲೇ ಸ್ಟೋರ್​ನಲ್ಲಿ ಈ ಆ್ಯಪ್ ಲಭ್ಯವಿದ್ದರೂ, ಬಳಸಲು ಯತ್ನಿಸುವಾಗ ದೋಷ ಕಾಣಿಸುತ್ತಿದೆ. ಫೇಸ್​ಆ್ಯಪ್ ದೋಷದ ಕುರಿತು ಬಳಕೆದಾರರು ಟ್ವಿಟರ್​ನಲ್ಲಿ ವರದಿ ಮಾಡಿದ್ದಾರೆ.

ಭಾರತದಿಂದ ಫೇಸ್​ಆ್ಯಪ್ ಬಳಸುವ ಆ್ಯಂಡ್ರಾಯ್ಡ್​ ಬಳಕೆದಾರರಿಗೆ, "ಏನೋ ತಪ್ಪಾಗಿದೆ, ದಯವಿಟ್ಟು ಮತ್ತೆ ಪ್ರಯತ್ನಿಸಿ" ("Something went wrong, Please try again") ಎಂಬ ಸಂದೇಶ ಬರುತ್ತದೆ. ಐಒಎಸ್ ಬಳಕೆದಾರರಿಗೆ, "ಎರರ್ 6 - ಕಾರ್ಯಚರಣೆಯನ್ನು ಪೂರ್ಣಗೊಳಿಸಲಾಗಲಿಲ್ಲ" ("ApiRequestError error 6 - Operation couldn't be completed") ಎಂಬ ಸಂದೇಶ ಬರುತ್ತಿದೆ. ಈ ಸಮಸ್ಯೆಯ ಕುರಿತು ಕೆಲವು ಟ್ವಿಟ್ಟರ್ ಬಳಕೆದಾರರು ವರದಿ ಮಾಡಿದ್ದಾರೆ.

ವೈರಲ್ ಆಗಿರುವ ವೃದ್ಧಾಪ್ಯದ ಫಿಲ್ಟರ್​ ಸೇರಿದಂತೆ ಹಲವು ಫಿಲ್ಟರ್​ಗಳನ್ನು ಹೊಂದಿರುವ ಫೇಸ್​ಆ್ಯಪ್, ಕೆಲವು ದಿನಗಳಿಂದ ಟ್ರೆಂಡ್​ನಲ್ಲಿದೆ. ಪ್ರತಿಯೊಬ್ಬರು ಫೇಸ್​ಆ್ಯಪ್ ಮೂಲಕ ತಮ್ಮ ವೃದ್ಧಾಪ್ಯದ ಲುಕ್​ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡುತ್ತಿದ್ದಾರೆ. ಆದರೆ ಕೆಲವು ಬಳಕೆದಾರರಿಗೆ ಈ ಆ್ಯಪ್ ಬಳಕೆ ಮಾಡುವಲ್ಲಿ ತೊಂದರೆ ಕಾಣಿಸುತ್ತಿದೆ.

ವೃದ್ಧಾಪ್ಯದ ಫಿಲ್ಟರ್ ಮಾತ್ರವಲ್ಲದೇ, ಈ ಆ್ಯಪ್ ಮೂಲಕ ಫೊಟೋದಲ್ಲಿ ನಗುವನ್ನು ಅಧಿಕಗೊಳಿಸಬಹುದು, ಹೇರ್​ಸ್ಟೈಲ್ ಹಾಗೂ ಲುಕ್​ ಬದಲಾಯಿಸಬಹುದು. ವೃದ್ಧಾಪ್ಯದ ಫಿಲ್ಟರ್​ನಂತೆಯೇ ಮಕ್ಕಳಂತೆ ಕಾಣುವ ಫಿಲ್ಟರ್​ ಕೂಡಾ ಇದರಲ್ಲಿದೆ.

ಫೇಸ್​ಆ್ಯಪ್ ವಿವಾದದಲ್ಲಿ ಸಿಲುಕಿಕೊಂಡಿರುವುದು ಇದೇ ಮೊದಲಲ್ಲ. 2017ರಲ್ಲಿ ಬಳಕೆದಾರರು ತಮ್ಮ ಜನಾಂಗೀಯತೆಯನ್ನು ಬದಲಾಯಿಸುವ ಫಿಲ್ಟರ್​ವೊಂದನ್ನು ಇದು ಬಿಡುಗಡೆಗೊಳಿಸಿತ್ತು. ಬಳಿಕ ಬಹಳಷ್ಟು ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ, ಈ ವಿವಾದಾತ್ಮಕ ಫಿಲ್ಟರನ್ನು ಫೇಸ್​ಆ್ಯಪ್ ತೆಗೆದು ಹಾಕಿತ್ತು.

ABOUT THE AUTHOR

...view details