ನವದೆಹಲಿ:ಕಾಶ್ಮೀರ ವಿಚಾರದಲ್ಲಿ ಅನಗತ್ಯವಾಗಿ ಕಿರಿಕ್ ಮಾಡುತ್ತಿರುವ ಪಾಕಿಸ್ತಾನದಲ್ಲೇ ನಿವಾಸಿಗಳಿಗೆ ಸಮರ್ಪಕವಾದ ಭದ್ರತೆ ಇಲ್ಲ ಎನ್ನುವುದು ಮತ್ತೊಮ್ಮೆ ಬಹಿರಂಗವಾಗಿದೆ.
ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್(ಪಿಟಿಐ) ಪಕ್ಷದ ಮಾಜಿ ಶಾಸಕ ಬಲದೇವ್ ಕುಮಾರ್ ಪಾಕಿಸ್ತಾನದಲ್ಲಿ ಅಭದ್ರತೆ ಕಾಡುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.
ಖೈಬರ್ ಫಂಖ್ತುಕ್ವ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಲದೇವ್ ಕುಮಾರ್ ತನ್ನ ಕುಟುಂಬಸ್ಥರೊಂದಿಗೆ ಬಾರಿಕೋಟ್ನಲ್ಲಿ ವಾಸಿಸುತ್ತಿದ್ದು, ಸದ್ಯ ಅಭದ್ರತೆಯ ಹಿನ್ನೆಲೆಯಲ್ಲಿ ಸೋಮವಾರ ಭಾರತಕ್ಕೆ ಆಗಮಿಸಿದ್ದಾರೆ.
ಭಾರತಕ್ಕೆ ಮರಳಿದ ಇಮ್ರಾನ್ ಖಾನ್ ಪಕ್ಷದ ಮಾಜಿ ಶಾಸಕ ಬಲದೇವ್ ಕುಮಾರ್ 43 ವರ್ಷದ ಬಲದೇವ್ ಕುಮಾರ್ ಹೇಳುವಂತೆ ಮುಸ್ಲಿಂ ಬಾಹುಳ್ಯವಿರುವ ಪಾಕಿಸ್ತಾನದಲ್ಲಿ ಹಿಂದೂಗಳಿಗೆ ಸುರಕ್ಷತೆ ಇಲ್ಲ ಎಂದಿದ್ದು, ಹಿಂದೂಗಳು ಹಾಗೂ ಸಿಖ್ಖರ ಮೇಲೆ ವಿನಾಕಾರಣ ಕಾನೂನುಕ್ರಮ ಜರುಗಿಸಲಾಗುತ್ತಿದೆ ಎಂದು ಆತಂಕ ಹೊರಹಾಕಿದ್ದಾರೆ.
ಸದ್ಯ ಭಾರತಕ್ಕೆ ಆಗಮಿಸಿರುವ ಬಲದೇವ್ ಕುಮಾರ್ ಮೇಲೆ 2018ರಲ್ಲಿ ಕೊಲೆ ಆರೋಪ ಹೊರಿಸಲಾಗಿತ್ತು. ವಿಚಾರಣೆಯ ಬಳಿಕ ಬಲದೇವ್ ಪಾತ್ರ ಇಲ್ಲದಿರುವುದನ್ನು ಗಮನಿಸಿ ಪ್ರಕರಣದಲ್ಲಿ ಖುಲಾಸೆಗೊಳಿಸಲಾಗಿತ್ತು.