ಕರ್ನಾಟಕ

karnataka

ETV Bharat / bharat

ಅಕ್ರಮ ಭೂ ನೋಂದಣಿಗೆ ಬ್ರೇಕ್​... ತೆಲಂಗಾಣ ಸರ್ಕಾರದ ಮಹತ್ವದ ನಿರ್ಧಾರ - ಕೆಸಿಆರ್ ಸರ್ಕಾರ

ಬೊಕ್ಕಸಕ್ಕೆ ಹೆಚ್ಚಿನ ಆದಾಯದ ಮೂಲವಾದ ಮುದ್ರಾಂಕ ಮತ್ತು ನೋಂದಣಿ ಇಲಾಖೆ ತನ್ನ ಗಳಿಕೆಯಲ್ಲಿ ವಿಫಲವಾಗಿದೆ. ಜೊತೆಗೆ ಭೂಮಿಯ ಬೆಲೆ ಹೆಚ್ಚಾಗುತ್ತಿರುವುದರಿಂದ ಭ್ರಷ್ಟಾಚಾರವೂ ವಿಪರೀತವಾಗುತ್ತಿದೆ. ಇದು ಅರಿವಿಗೆ ಬಂದ ನಂತರ ಮುಖ್ಯಮಂತ್ರಿ ಕೆ ಚಂದ್ರಶೇಖರ್​ ರಾವ್​ ಅವರ ಸರ್ಕಾರ ಹೊಸ ಕಾನೂನಿನ ದುರ್ಬಳಕೆ, ಅಕ್ರಮ ಇತ್ಯಾದಿಗಳಿಗೆ ಇತಿಶ್ರೀ ಹಾಡಿದೆ.

End to illegal registration in Telangana
ತೆಲಂಗಾಣ: ಅಕ್ರಮ ನೋಂದಣಿಗೆ ಅಂತ್ಯ

By

Published : Sep 13, 2020, 10:19 AM IST

ಹೈದ್ರಾಬಾದ್​​​:ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಕೆಸಿಆರ್ (ಕೆ. ಚಂದ್ರಶೇಖರ ರಾವ್ ) ಅವರು 'ನಾವು ಮತ್ತೆ ಕಟ್ಟೋಣ ...ಹಲವು ತ್ಯಾಗಗಳನ್ನು ಮಾಡಿ ನಮ್ಮ ತೆಲಂಗಾಣದ ಅಭಿವೃದ್ಧಿ ಸಾಧಿಸೋಣ' ಎನ್ನುತ್ತ ಹೊಸ ಕಂದಾಯ ನಿಯಮಗಳನ್ನು ಜಾರಿಗೊಳಿಸಿ ಭೂ ಸುಧಾರಣೆಯ ಹೊಸ ಯುಗಕ್ಕೆ ನಾಂದಿ ಹಾಡಿದರು. ಅದರಂತೆ ಸಮಗ್ರ ಭೂ ಸಮೀಕ್ಷೆ ಕೈಗೊಂಡು 30 ವರ್ಷಗಳಿಗೊಮ್ಮೆ ಭೂ ದಾಖಲೆಗಳನ್ನು ಪರಿಷ್ಕರಿಸುವ ನಿರ್ಧಾರ ರೂಪುಗೊಳ್ಳಬೇಕಿತ್ತು. ಆದರೆ ಅದನ್ನು ಜಾರಿಗೆ ತರುವಾಗ ಉಂಟಾದ ವೈಫಲ್ಯ ಭೂ ವಿವಾದಗಳಿಗೆ ಮಾತ್ರವಲ್ಲ, ದೊಡ್ಡ ಹಗರಣಗಳಿಗೂ ಕಾರಣವಾಗಿದೆ.

ಬೊಕ್ಕಸಕ್ಕೆ ಹೆಚ್ಚಿನ ಆದಾಯದ ಮೂಲವಾದ ಮುದ್ರಾಂಕ ಮತ್ತು ನೋಂದಣಿ ಇಲಾಖೆ ತನ್ನ ಗಳಿಕೆಯಲ್ಲಿ ವಿಫಲವಾಗಿದೆ. ಜೊತೆಗೆ ಭೂಮಿಯ ಬೆಲೆ ಹೆಚ್ಚಾಗುತ್ತಿರುವುದರಿಂದ ಭ್ರಷ್ಟಾಚಾರವೂ ವಿಪರೀತವಾಗುತ್ತಿದೆ. ಇದು ಅರಿವಿಗೆ ಬಂದ ನಂತರ ಕೆಸಿಆರ್ ಸರ್ಕಾರ ಹೊಸ ಕಾನೂನಿನ ದುರ್ಬಳಕೆ, ಅಕ್ರಮ ಇತ್ಯಾದಿಗಳಿಗೆ ಇತಿಶ್ರೀ ಹಾಡಿದೆ.

22 ಬಗೆಯ ಜಮೀನಿನ ಪ್ರಕಾರಗಳು ಮತ್ತು 100 ಕ್ಕೂ ಹೆಚ್ಚು ನಿಯಮಗಳಿಂದಾಗಿ ನೋಂದಣಿ ಪ್ರಕ್ರಿಯೆಯ ಎಲ್ಲಾ ಹಂತಗಳಲ್ಲಿ ಭ್ರಷ್ಟಾಚಾರ ಮನೆ ಮಾಡಿದೆ. ಆಧುನಿಕ ತಂತ್ರಜ್ಞಾನದ ಸಹಾಯದಿಂದ ಹೊಸ ಕಾಯ್ದೆ ಪಾರದರ್ಶಕವಾಗಿದೆ. ಅಲ್ಲದೆ ಜನರ ಕೈಗೆಟಕುವಂತಿದ್ದು ಬಳಕೆಯೂ ಸಲುಭವಾಗಿದೆ ಹಾಗೂ ವಹಿವಾಟಿನಲ್ಲಿ ದಕ್ಷತೆ ಸಾಧ್ಯವಾಗಿದೆ. ಎಲ್ಲಾ ಸರ್ಕಾರಿ ಭೂಮಿಯನ್ನು 'ಆಟೊಲಾಕ್' ವ್ಯಾಪ್ತಿಗೆ ತಂದು ಭೂ ಕಬಳಿಕೆದಾರರ ಅಕ್ರಮ ಒತ್ತುವರಿಗೆ ಕಡಿವಾಣ ಹಾಕುವುದು, ಕಂದಾಯ ದಾಖಲೆಗಳನ್ನು ತಿರುಚಿ ಸರ್ಕಾರಿ ಆಸ್ತಿಗಳನ್ನು ಲೂಟಿ ಮಾಡುವ ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಡುವುದರಿಂದ ಇಲಾಖೆಯ ಭ್ರಷ್ಟಾಚಾರ ಮತ್ತು ಅಕ್ರಮ ನಿಯಂತ್ರಣಕ್ಕೆ ಬರಲಿದೆ. ಒಂದೇ ದಿನದಲ್ಲಿ ನೋಂದಣಿ ಮತ್ತು ಭೂ ಪರಿವರ್ತನೆ ಪ್ರಕ್ರಿಯೆ ಪೂರ್ಣಗೊಳಿಸುವುದರಿಂದ ಖರೀದಿದಾರರಿಗೆ ಮತ್ತು ಮಾರಾಟಗಾರರಿಗೆ ಹೆಚ್ಚಿನ ಪರಿಹಾರ ದೊರೆತು ಅನುಕೂಲಕರವಾಗಿರುತ್ತದೆ.

ಧರಣಿ ಪೋರ್ಟಲ್ ಕಂದಾಯ ಇಲಾಖೆಯ ಜೀವಸೆಲೆಯಾಗಬೇಕಾದರೆ ಪ್ರಸ್ತುತ ಕಂದಾಯ ಇಲಾಖೆಯಲ್ಲಿ ಬಾಕಿ ಇರುವ ಪ್ರಕರಣಗಳನ್ನು ತಾತ್ಕಾಲಿಕ ನ್ಯಾಯಮಂಡಳಿ ಸ್ಥಾಪಿಸಿ ಅವುಗಳಿಗೆ ವರ್ಗಾಯಿಸಬೇಕು ಎಂದು ತೆಲಂಗಾಣ ಸರ್ಕಾರ ಹೇಳುತ್ತದೆ. ಧರಣಿ ಪೋರ್ಟಲ್ ತನ್ನ ಅಸ್ತಿತ್ವ ಪರಿಪೂರ್ಣಗೊಳಿಸಲು ನಿಷ್ಠೆಯಿಂದ ಸಮಗ್ರ ಭೂ ಸಮೀಕ್ಷೆ ಕಾರ್ಯ ನಡೆಸಬೇಕು ಹಾಗೂ ಭೂ ದಾಖಲೆಗಳನ್ನು ಪರಿಷ್ಕರಿಸಿ ನವೀಕರಿಸಬೇಕು. ಭೂ ವಿವಾದಗಳಿಗೆ ಪರಿಹಾರದಂತೆ ಒದಗಿಬಂದು ಸಾಮಾನ್ಯ ಜನರಿಗೆ ಹತ್ತಿರವಾದ ಬಿಹಾರ ನ್ಯಾಯಮಂಡಳಿಯ ಮಾದರಿಯನ್ನು ಸಹ ಪರಿಶೀಲಿಸಬೇಕು.

ಹಳ್ಳಿಗಳಲ್ಲಿ ಶೇ. 2, ಪಟ್ಟಣಗಳಲ್ಲಿ ಶೇ. 14 ಹಾಗೂ ನಗರಗಳಲ್ಲಿ ಶೇ. 28ರಷ್ಟು ಜಮೀನು ವಿವಾದದಲ್ಲಿದೆ ಎಂದು ಬಹಳ ಹಿಂದೆಯೇ ಯೋಜನಾ ಆಯೋಗ ಹೇಳಿದೆ. ದೇಶಾದ್ಯಂತ ಮೂರನೇ ಎರಡು ಭಾಗದಷ್ಟು ಸಿವಿಲ್ ಪ್ರಕರಣಗಳು ಭೂವ್ಯಾಜ್ಯಕ್ಕೆ ಸಂಬಂಧಿಸಿವೆ ಎಂದು ಮತ್ತೊಂದು ಅಧ್ಯಯನ ದೃಢಪಡಿಸಿದೆ. ಸ್ಪಷ್ಟ ಭೂಮಿಯ ಹಕ್ಕುಗಳು, ನಿಖರ ಭೂ ದಾಖಲೆಗಳು ಮತ್ತು ಉತ್ತಮ ಆದಾಯ ನಿರ್ವಹಣೆ ಮಾಡುವುದರಿಂದ ಜಿಡಿಪಿಯಲ್ಲಿ ಶೇಕಡಾ 1.3 ರಷ್ಟು ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ಅಂದಾಜಿಸಲಾಗಿದೆ. ಆದ್ದರಿಂದ, ಅಮೆರಿಕ, ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ, ಸಿಂಗಪುರ ಮತ್ತು ಸ್ವಿಜರ್ಲೆಂಡ್ ರೀತಿಯ ದೇಶಗಳು ಭೂ ಮಾಲೀಕತ್ವಕ್ಕೆ ಸಂಪೂರ್ಣ ರಕ್ಷಣೆ ನೀಡುವ "ಟೈಟಲ್ ಗ್ಯಾರಂಟಿ" ವ್ಯವಸ್ಥೆ ಸ್ಥಾಪಿಸಿವೆ. 2016 ರಲ್ಲಿ, ಅಂತಹ ‘ಟೈಟಲ್ ಗ್ಯಾರಂಟಿ’ ಮೂಲಕ ಭೂ ದಾಖಲೆಗಳನ್ನು ಸರಿಪಡಿಸಲು ಕೇಂದ್ರ ಸರ್ಕಾರ ಪ್ರಸ್ತಾಪಿಸಿತು. ಜೊತೆಗೆ ತಂತ್ರಜ್ಞಾನದ ಸಹಾಯದಿಂದ ಭೂ ವ್ಯವಹಾರಗಳ ತ್ವರಿತ ಸಂಯೋಜನೆ, ಇತರ ಭೂ ದಾಖಲೆಗಳೊಂದಿಗೆ ಸರ್ವೇ ದಾಖಲೆಗಳ ಸಂಯೋಜನೆ, ಜೊತೆಗೆ ಕಂದಾಯ ಮತ್ತು ನೋಂದಣಿ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಮುಂದಾಯಿತು.

ದೇಶದೆಲ್ಲೆಡೆ ಗ್ರಾಮೀಣ ಭಾರತದಲ್ಲಿ ಭೂ ದಾಖಲೆಗಳನ್ನು ನವೀಕರಿಸಲು ಕೇಂದ್ರ ಸರ್ಕಾರ 11,000 ಕೋಟಿ ರೂ.ಗಳ ಯೋಜನೆ ಸಿದ್ಧಪಡಿಸಿತು. ಆದರೆ ಅದರ ಬಸವನಹುಳುವಿನಂತಹ ವೇಗವನ್ನು ಗಮನದಲ್ಲಿಟ್ಟುಕೊಂಡು, ಕೆಸಿಆರ್ ಸರ್ಕಾರ ಕ್ಷಿಪ್ರ ಮತ್ತು ಸಮಗ್ರ ಭೂ ಸಮೀಕ್ಷೆ ಕೈಗೊಳ್ಳಲು ಸಿದ್ಧತೆ ನಡೆಸಿದೆ. ಕರ್ನಾಟಕ ಸರ್ಕಾರ ಪಟ್ಟಣಗಳಲ್ಲಿ ಖಾಲಿ ಇರುವ ಜಮೀನುಗಳನ್ನು ಒಳಗೊಂಡಂತೆ ರಿಯಲ್ ಎಸ್ಟೇಟ್ ಸಮೀಕ್ಷೆ ನಡೆಸಿದೆ ಮತ್ತು ಡೇಟಾಬೇಸ್‌ನಲ್ಲಿನ ಸಂಖ್ಯೆಗಳೊಂದಿಗೆ ವಿವರಗಳನ್ನು ಸೇರಿಸಿದೆ. ಉತ್ತರಪ್ರದೇಶ ಸರ್ಕಾರ ಭೂ ಕಂದಾಯ ಸಂಹಿತೆ ಜಾರಿಗೆ ತಂದಿರುವ ಏಕೈಕ ಆದರ್ಶಪ್ರಾಯ ರಾಜ್ಯವಾಗಿದೆ. ಜಿಲ್ಲಾಮಟ್ಟದಲ್ಲಿ ಭೂ ಇತ್ಯರ್ಥ ನ್ಯಾಯಮಂಡಳಿ ಮತ್ತು ರಾಜ್ಯ ಮಟ್ಟದಲ್ಲಿ ಮೇಲ್ಮನವಿ ನ್ಯಾಯಾಧಿಕರಣ ಅಸ್ತಿತ್ವದಲ್ಲಿ ಇದ್ದರೆ ಅದರಿಂದ ಸಾರ್ವಜನಿಕರಿಗೆ ದೊಡ್ಡಮಟ್ಟದಲ್ಲಿ ಉಪಯೋಗವಾಗಲಿದೆ. ರೆಕಾರ್ಡ್ ಆಫ್ ರೈಟ್ ( ಆರ್ ಒ ಆರ್ ) ನಲ್ಲಿನ ಮಾಹಿತಿಯನ್ನು ತಕ್ಷಣವೇ ಟೈಟಲ್ ಗ್ಯಾರಂಟಿ ವ್ಯವಸ್ಥೆಗೆ ಬದಲಿಸಲು ತೆಲಂಗಾಣ ಸರ್ಕಾರ ಕೈಗೊಂಡಿರುವ ನಿರ್ಧಾರ ಇಡೀ ದೇಶಕ್ಕೆ ಆದರ್ಶಪ್ರಾಯವಾಗಲಿದೆ !

ABOUT THE AUTHOR

...view details