ಕರ್ನಾಟಕ

karnataka

ಭಾರತೀಯ ಯೋಧರಿಂದಲೂ ದಿಟ್ಟ ಪ್ರತ್ಯುತ್ತರ: ಬಲಿಯಾದ ಚೀನಾ ಸೈನಿಕರೆಷ್ಟು ಗೊತ್ತೆ?

By

Published : Jun 16, 2020, 6:46 PM IST

ಚೀನಾದ ದಾಳಿಗೆ ಭಾರತೀಯ ಯೋಧರು ಕೂಡ ದಿಟ್ಟ ಪ್ರತ್ಯುತ್ತರ ನೀಡಿದ್ದಾರೆ. ಚೀನಾದ ಐವರು ಸೈನಿಕರು ಸಹ ಘರ್ಷಣೆಯಲ್ಲಿ ಸಾವನ್ನಪ್ಪಿದ್ದು, 11 ಸೈನಿಕರು ಗಾಯಗೊಂಡಿದ್ದಾರೆ ಎಂದು ಚೀನಾದ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

Indo China
ಇಂಡೋ ಚೀನಾ

ಬೀಜಿಂಗ್​:ಸೋಮವಾರ ರಾತ್ರಿ ಲಡಾಖ್​ನ ಗಾಲ್ವಾನ್ ಕಣಿವೆ ಪ್ರದೇಶದ ನೈಜ ಗಡಿ ರೇಖೆ (ಎಲೆಎಸಿ) ವ್ಯಾಪ್ತಿಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ಭಾರತೀಯ ಸೈನ್ಯದ ಅಧಿಕಾರಿ ಮತ್ತು ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ.

ಚೀನಾದ ದಾಳಿಗೆ ಭಾರತೀಯ ಯೋಧರು ಕೂಡ ದಿಟ್ಟ ಪ್ರತ್ಯುತ್ತರ ನೀಡಿದ್ದಾರೆ. ಚೀನಾದ ಐದು ಸೈನಿಕರು ಸಹ ಘರ್ಷಣೆಯಲ್ಲಿ ಸಾವನ್ನಪ್ಪಿದ್ದು 11 ಸೈನಿಕರು ಗಾಯಗೊಂಡಿದ್ದಾರೆ ಎಂದು ಚೀನಾದ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ಭಾರತದ ಪಡೆಯ ದಾಳಿಗೆ ಗಾಲ್ವಾನ್​ ಕಣಿವೆ ಪ್ರದೇಶದಲ್ಲಿ ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿಯ ಐವರು ಯೋಧರು ಬಲಿಯಾಗಿದ್ದಾರೆ. ಹನ್ನೊಂದು ಸೈನಿಕರು ಘರ್ಷಣೆಯಲ್ಲಿ ಗಾಯಗೊಂಡಿದ್ದಾರೆ ಎಂದು ಗ್ಲೋಬಲ್​ ಟೈಮ್ಸ್​ನ ವಾಂಗ್​ ವೆನ್​ವೆನ್​ ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ.

"ಗಾಲ್ವಾನ್ ವ್ಯಾಲಿಯ ಘರ್ಷಣೆಯಲ್ಲಿ ಚೀನಾದ ಕಡೆಯವರು ಸಹ ಸಾವು-ನೋವುಗಳನ್ನು ಅನುಭವಿಸಿದ್ದಾರೆ. ನಾನು ಭಾರತೀಯರ ಪರವಾಗಿ ಹೇಳಲು ಬಯಸುತ್ತೇನೆ, ಚೀನಾದ ಸಂಯಮವನ್ನು ದುರ್ಬಲ ಎಂದು ತಪ್ಪಾಗಿ ಅರ್ಥಮಾಡಿಕೊಳ್ಳಬೇಡಿ" ಎಂದು ಗ್ಲೋಬಲ್ ಟೈಮ್ಸ್​ನ ಪ್ರಧಾನ ಸಂಪಾದಕ ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details