ಮುಂಬೈ:ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ಸಂಬಂಧ ಶೃತಿ ಮೋದಿಯನ್ನು ಇಂದು ಹಾಗೂ ಸ್ನೇಹಿತ ಸಿದ್ಧಾರ್ಥ್ ಪಿಥಾನಿಯನ್ನು ಆಗಸ್ಟ್ 8 ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ನೀಡಿದೆ.
ಪ್ರಕರಣ ಸಂಬಂಧ ಆರು ಜನರ ವಿರುದ್ಧ ಈಗಾಗಲೇ FIR ದಾಖಲಾಗಿತ್ತು. ಈ ಪೈಕಿ ನಟಿ ರಿಯಾ ಚಕ್ರವರ್ತಿ, ಶೃತಿ ಮೋದಿ ಮತ್ತು ಸಿದ್ಧಾರ್ಥ್ ಪಿಥಾನಿ ಅವರ ಹೆಸರು ಕೂಡ ಸೇರಿವೆ. ರಿಯಾ ಚಕ್ರವರ್ತಿಗೆ ಇಂದು ಇಡಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಈಗಾಗಲೇ ರಿಯಾ ಇಡಿ ಕಚೇರಿ ತಲುಪಿದ್ದು, ಅಧಿಕಾರಿಗಳು ವಿಚಾರಣೆ ಪ್ರಾರಂಭಿಸಿದ್ದಾರೆ.