ನವದೆಹಲಿ:ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ಬಹು ಕೋಟಿ ರೂಪಾಯಿ ವಂಚನೆ ಮಾಡಿದ ಸಂಬಂಧ ದೇಶ ಬಿಟ್ಟು ಬ್ರಿಟನ್ಗೆ ಪರಾರಿಯಾಗಿರುವ ವಜ್ರೋದ್ಯಮಿ ನೀರವ್ ಮೋದಿಗೆ ಸೇರಿದ 11 ಐಶಾರಾಮಿ ಕಾರುಗಳನ್ನು ಹರಾಜು ಹಾಕಲು ಜಾರಿ ನಿರ್ದೇಶನಾಲಯ ಗ್ರೀನ್ ಸಿಗ್ನಲ್ ಕೊಟ್ಟಿದೆ.
ನೀರವ್ ಮೋದಿಯ 11 ಐಶಾರಾಮಿ ಕಾರುಗಳ ಹರಾಜಿಗೆ ಇಡಿ ಗ್ರೀನ್ ಸಿಗ್ನಲ್ - ಐಶಾರಾಮಿ ಕಾರು
ನೀರವ್ ಮೋದಿಗೆ ಸೇರಿದ 11 ಐಶಾರಾಮಿ ಕಾರುಗಳನ್ನು ಹರಾಜು ಹಾಕಲು ಜಾರಿ ನಿರ್ದೇಶನಾಲಯ ಗ್ರೀನ್ ಸಿಗ್ನಲ್ ಕೊಟ್ಟಿದೆ.
ನೀರವ್ ಮೋದಿ
ನೀರವ್ ಮೋದಿಗೆ ಸೇರಿದ ಮರ್ಸಿಡಿಸ್ ಬೇನ್ಜ್, ರೋಲ್ಸ್ ರಾಯ್ಸ್, ಪೋರ್ಷೆ ಮೊದಲಾದ ಕಾರುಗಳು ಹರಾಜಿನಲ್ಲಿದ್ದು, ಭಾರತೀಯ ಮೆಟಲ್ ಆ್ಯಂಡ್ ಸ್ಕ್ರ್ಯಾಪ್ ಕಾರ್ಪೊರೇಷನ್ಗೆ ಟೆಂಡರ್ ನೀಡಲಾಗಿದ್ದು, ಕೊಳ್ಳಲು ಇಚ್ಚಿಸುವವರು ಟೆಸ್ಟ್ ಡ್ರೈವ್ ನೋಡಬಹುದು ಎಂದು ಇಡಿ ಹೇಳಿದೆ.
ನೀರವ್ ಮೋದಿಯನ್ನು ವಾರದ ಹಿಂದೆ ಸ್ಕಾಂಟ್ಲಂಡ್ ಪೊಲೀಸರು ಬಂಧಿಸಿ ಜೈಲಿಗೆ ತಳ್ಳಿದ್ದರು. ಬ್ಯಾಂಕ್ ಖಾತೆ ತೆರೆಯಲು ಬಂದಿದ್ದ ವೇಳೆ ನೀರವ್ ಮೋದಿ ಬಂಧನಕ್ಕೊಳಗಾಗಿದ್ದರು.