ಕರ್ನಾಟಕ

karnataka

ETV Bharat / bharat

ಐಜಾಜ್​ ಹುಸೇನ್​ ಹವಾಲಾ ಹಗರಣ: ಆಸ್ತಿ ಲಗತ್ತಿಸಿಕೊಂಡ ಜಾರಿ ನಿರ್ದೇಶನಾಲಯ

ಭಯೋತ್ಪಾದಕ ಧನಸಹಾಯ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಐಜಾಜ್ ಹುಸೇನ್ ಖವಾಜಾ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಲಗತ್ತಿಸಿದೆ. 2006ರಲ್ಲಿ ಆತನಿಂದ 49 ಲಕ್ಷ ರೂ. ಬೆಲೆಬಾಳುವ 2.05 ಕಿಲೋಗ್ರಾಂಗಳಷ್ಟು ಆರ್‌ಡಿಎಕ್ಸ್ ವಶಪಡಿಸಿಕೊಳ್ಳಲಾಗಿತ್ತು.

ed
ed

By

Published : Jul 1, 2020, 1:15 PM IST

ನವದೆಹಲಿ:ಹವಾಲಾ ಆಪರೇಟರ್‌ಗಳ ವಿರುದ್ಧ ಕ್ರಮ ಕೈಗೊಂಡಿರುವ ಜಾರಿ ನಿರ್ದೇಶನಾಲಯ (ಇಡಿ) ಐಜಾಜ್ ಹುಸೇನ್ ಖವಾಜಾ ಆಸ್ತಿಗಳನ್ನು ಮುಟ್ಟಿಗೋಲಿಗಾಗಿ ಲಗತ್ತಿಸಿಕೊಂಡಿದೆ.

ಭಯೋತ್ಪಾದಕ ಧನಸಹಾಯ ಪ್ರಕರಣದಲ್ಲಿ ಖವಾಜಾನಿಂದ 2006ರಲ್ಲಿ 49 ಲಕ್ಷ ರೂ. ಬೆಲೆಬಾಳುವ 2.05 ಕಿಲೋಗ್ರಾಂಗಳಷ್ಟು ಆರ್‌ಡಿಎಕ್ಸ್ ವಶಪಡಿಸಿಕೊಳ್ಳಲಾಗಿತ್ತು.

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ನಿವಾಸಿ ಖವಾಜಾ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ 2002 (ಪಿಎಂಎಲ್‌ಎ) ಅಡಿಯಲ್ಲಿ 7.32 ಲಕ್ಷ ರೂ.ಗಳ ಮೌಲ್ಯದ ಆಸ್ತಿಯನ್ನು ಲಗತ್ತಿಸಲಾಗಿದೆ ಎಂದು ಇಡಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ವಿವಿಧ ಅಕ್ರಮ ಚಟುವಟಿಕೆಗಳಿಗೆ ಧನಸಹಾಯ ನೀಡಲು ಖವಾಜಾ ಹವಾಲಾ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿರುವುದು ತನಿಖೆಯ ವೇಳೆ ತಿಳಿದು ಬಂದಿದೆ ಎಂದು ಇಡಿ ಹೇಳಿದೆ.

"ಅಂತಹ ಅಕ್ರಮ ಹವಾಲಾ ಕಾರ್ಯಾಚರಣೆಯಿಂದ, ಖವಾಜಾ 8.50 ಲಕ್ಷ ರೂ. ಗಳಿಸಿದ್ದ. ಹವಾಲಾ ಆಪರೇಟರ್ ಆಗಿದ್ದ ಆತ ಪಾಕಿಸ್ತಾನದ ಮುಖ್ತಿಯಾರ್ ಅಹ್ಮದ್ ಭಟ್ ಅಲಿಯಾಸ್ ಅಹ್ಮದ್​ನೊಂದಿಗೂ ಸಂಪರ್ಕದಲ್ಲಿದ್ದ" ಎಂದು ಇಡಿ ತಿಳಿಸಿದೆ.

ಮನೆ ಮತ್ತು ಬ್ಯಾಂಕ್ ಬ್ಯಾಲೆನ್ಸ್ ರೂಪದಲ್ಲಿ ಸ್ವತ್ತುಗಳನ್ನು ಗುರುತಿಸಿಲಾಗಿದ್ದು, ಆಸ್ತಿಯನ್ನು ಲಗತ್ತಿಸಲಾಗಿದೆ ಎಂದು ಇಡಿ ಹೇಳಿದೆ.

ಏನಿದು ಆಸ್ತಿ ಲಗತ್ತಿಸುವುದು?:ಪಿಎಂಎಲ್‌ಎ ಸೆಕ್ಷನ್ 5 ರ ಪ್ರಕಾರ, ಇಡಿ ನಿರ್ದೇಶಕರು ಅಥವಾ ಅವರಿಂದ ಅಧಿಕಾರ ಪಡೆದ ಯಾವುದೇ ಅಧಿಕಾರಿ (ಉಪ ನಿರ್ದೇಶಕರು ಮತ್ತು ಮೇಲಿನವರು) ನಿಗದಿತ ಅಪರಾಧದ ಸಂದರ್ಭದಲ್ಲಿ ವಶಪಡಿಸಿಕೊಂಡ ಆದಾಯ ಹಾಗೂ ಆಸ್ತಿಯನ್ನ ಲಗತ್ತಿಸಲು ಆದೇಶಗಳನ್ನು ನೀಡಬಹುದು. ಹೀಗೆ ವಶಪಡಿಸಿಕೊಂಡ ಆಸ್ತಿಯನ್ನ ಆರೋಪಿ ಬೇರೆಯವರಿಗೆ ವರ್ಗಾಯಿಸಬಹುದು, ಇಲ್ಲವೇ ಇದನ್ನು ಮರೆಮಾಚುವ ಪ್ರಯತ್ನ ಮಾಡಬಹುದು ಎಂದು ತನಿಖಾಧಿಕಾರಿಗಳಿಗೆ ಅನುಮಾನ ಬಂದರೆ ಇಂತಹ ಲಗತ್ತು ಆದೇಶವನ್ನ ಮಾಡಬಹುದಾಗಿದೆ. ಈ ಮೂಲಕ ಯಾವುದೇ ಸಂದರ್ಭದಲ್ಲಿ ಇಂತಹ ಅಕ್ರಮ ಆಸ್ತಿಯನ್ನ ಮುಟ್ಟುಗೋಲು ಹಾಕಿಕೊಳ್ಳುವ ಹಕ್ಕನ್ನು ಇಡಿ ಪಡೆದುಕೊಳ್ಳುತ್ತದೆ.

ABOUT THE AUTHOR

...view details