ಪ್ಯಾರಿಸ್:ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ರಾಷ್ಟ್ರ ಭಯೋತ್ಪಾದನೆಯ ಡಿಎನ್ಎ ಆಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಭಾರತದ ವಿರುದ್ಧ ಸದಾ ಅಪಪ್ರಚಾರದಲ್ಲಿ ತೊಡಗಿರುವ ಪಾಕಿಸ್ತಾನಕ್ಕೆ ಯುನೆಸ್ಕೋದಲ್ಲಿ ಗುರುವಾರ ತಕ್ಕುದಾಗಿ ಅನನ್ಯಾ ಅಗರ್ವಾಲ್ ಹೇಳಿಕೆಯನ್ನು ನೀಡಿದ್ದಾರೆ.
ಯುನೆಸ್ಕೊ ಸಭೆಯಲ್ಲಿ ಭಾರತದ ಪ್ರತಿನಿಧಿಗಳ ನೇತೃತ್ವವನ್ನು ವಹಿಸಿರುವ ಅಗರ್ವಾಲ್ ಮಾನಸಿಕ ಸ್ಥಿತಿಯ ಪರಿಣಾಮವಾಗಿ ಪಾಕಿಸ್ತಾನವು ಆರ್ಥಿಕ ಕುಸಿತ, ಮೂಲಭೂತವಾದಿ ಸಮಾಜ ಹಾಗೂ ಭಯೋತ್ಪಾದನೆಯ ಮೂಲವಾಗಿದೆ ಎಂದಿದ್ದಾರೆ.
ಭಾರತದ ವಿರುದ್ಧ ದ್ವೇಷಕಾರಲು ಯುನೆಸ್ಕೋ ವೇದಿಕೆಯನ್ನು ದುರುಪಯೋಗ ಪಡಿಸಿಕೊಂಡ ಹಾಗೂ ರಾಜಕೀಯಗೊಳಿಸಿರುವ ಪಾಕಿಸ್ತಾನದ ಕ್ರಮವನ್ನು ಖಂಡಿಸುವುದಾಗಿ ಹೇಳಿದ್ದು, ತೀವ್ರಗಾಮಿ ಸಿದ್ಧಾಂತ ಹಾಗೂ ಮೂಲಭೂತವಾದಿ ಧೋರಣೆಯೊಂದಿಗೆ ಭಯೋತ್ಪಾದನೆಯ ಕರಾಳತೆಯನ್ನು ಪಾಕಿಸ್ತಾನ ಹೊಂದಿದೆ ಎಂದಿದ್ದಾರೆ.
ಸೆಪ್ಟೆಂಬರ್‌ನಲ್ಲಿ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಪಾಕ್ನ ಪ್ರಧಾನಿ ಇಮ್ರಾನ್ ಖಾನ್ ಪ್ರಸ್ತಾಪಿಸಿದ ಅಂಶವನ್ನು ಉಲ್ಲೇಖಿಸಿದ ಅಗರ್ವಾಲ್, ಅಣ್ವಸ್ತ್ರ ಬಳಸಿ ಸಮರ ಮತ್ತು ಇತರೆ ರಾಷ್ಟ್ರಗಳ ವಿರುದ್ಧ ಶಸ್ತ್ರಾಸ್ತ್ರ ಬಳಕೆಗೆ ಕರೆ ನೀಡಲು ವಿಶ್ವಸಂಸ್ಥೆ ವೇದಿಕೆಯನ್ನು ಬಳಸಿದಂತಹ ರಾಷ್ಟ್ರ ಪಾಕಿಸ್ತಾನ. ಇಷ್ಟೇ ಅಲ್ಲದೇ ಭಯೋತ್ಪಾದನೆಯನ್ನು ಹರಡುತ್ತಿರುವ ರಾಷ್ಟ್ರ, ಭಾರತದ ವಿರುದ್ಧ ಅಣ್ವಸ್ತ್ರ ಬಳಸುವ ಬೇದರಿಕೆಯನ್ನೊಡ್ಡಿದ್ದರು ಎಂದು ಇದೇ ವೇಳೆ ನೆನಪಿಸಿಕೊಂಡಿದ್ದಾರೆ.
1947ರಲ್ಲಿ ಪಾಕಿಸ್ತಾನದ ಜನಸಂಖ್ಯೆಯ ಪೈಕಿ ಶೇ.23ರಷ್ಟು ಇದ್ದ ಅಲ್ಪಸಂಖ್ಯಾತ ಸಮುದಾಯ ಶೇ.3ಕ್ಕೆ ಇಳಿಕೆಯಾಗಿದ್ದು, ಒತ್ತಾಯ ಪೂರ್ವಕ ಮದುವೆ,ಮಹಿಳೆ ಮೇಲಿನ ದೌರ್ಜನ್ಯ,ಮತಾಂತರ,ಬಾಲ್ಯ ವಿವಾಹದಂತಹ ಹಲವಾರು ಗಂಭೀರ ಸಮಸ್ಯೆಯನ್ನು ಹೊಂದಿರುವ ರಾಷ್ಟ್ರ ಈ ದಿನಗಳಲ್ಲಿ ಭಾರತದ ವಿರುದ್ಧ ಅನಾವಶ್ಯಕ ಆರೋಪವನ್ನು ಮಾಡುತ್ತಿದೆ ಎಂದು ತೀಕ್ಷ್ಣವಾಗಿ ಆರೋಪಿಸಿದ್ದಾರೆ.