ಹ್ಯೂಸ್ಟನ್:ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹ್ಯೂಸ್ಟನ್ ತಲುಪಿರುವ ಪ್ರಧಾನಿ ನರೇಂದ್ರ ಮೋದಿ, ವಿಮಾನ ನಿಲ್ದಾಣದಲ್ಲಿ ತಮ್ಮನ್ನು ಸ್ವಾಗತಿಸುವ ಸಂದರ್ಭದಲ್ಲಿ ಕೊಟ್ಟ ಪುಷ್ಪಗುಚ್ಚದಿಂದ ಕೆಳಗೆ ಬಿದ್ದ ಹೂವನ್ನು ನೆಲದ ಮೇಲಿಂದ ಸ್ವಾಭಾವಿಕವಾಗಿಯೇ ಎತ್ತಿಕೊಳ್ಳುವ ಮೂಲಕ ನೆಟಿಜನ್ಗಳು ಪ್ರಭಾವಿತರಾಗುವಂತೆ ಮಾಡಿದ್ದಾರೆ.
ಹ್ಯೂಸ್ಟನ್ನಲ್ಲಿ ಪ್ರಧಾನಿ ಮೋದಿ... ಈ ನಡೆ ಕಂಡು 'ನಮೋ' ಅಂದ್ರು ನೆಟಿಜನ್ಗಳು!
ಹ್ಯೂಸ್ಟನ್ ತಲುಪಿರುವ ಪ್ರಧಾನಿ ನರೇಂದ್ರ ಮೋದಿ, ವಿಮಾನ ನಿಲ್ದಾಣದಲ್ಲಿ ತಮ್ಮನ್ನು ಸ್ವಾಗತಿಸುವ ಸಂದರ್ಭದಲ್ಲಿ ಕೊಟ್ಟ ಪುಷ್ಪಗುಚ್ಚದಿಂದ ಕೆಳಗೆ ಬಿದ್ದ ಹೂವನ್ನು ನೆಲದ ಮೇಲಿಂದ ಸ್ವಾಭಾವಿಕವಾಗಿಯೇ ಎತ್ತಿಕೊಳ್ಳುವ ಮೂಲಕ ನೆಟಿಜನ್ಗಳು ಪ್ರಭಾವಿತರಾಗುವಂತೆ ಮಾಡಿದ್ದಾರೆ. ಇದು ಪ್ರಧಾನಿಯವರ ಸ್ವಚ್ಛ ಭಾರತ ಅಭಿಯಾನದ ಸಂಕೇತವಾಗಿರಬಹುದೇನೋ ಅಂತಾ ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ವಿಮಾನದಿಂದ ಕೆಳಗೆ ಇಳಿಯುತ್ತಲೇ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಭಾರತ ಹಾಗೂ ಅಮೆರಿಕದ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಇದ್ದರು. ಈ ವೇಳೆ ಮಹಿಳಾ ಅಧಿಕಾರಿಯೊಬ್ಬರು ಮೋದಿ ಅವರಿಗೆ ಪುಷ್ಪಗುಚ್ಚ ನೀಡಿದ್ದಾರೆ. ಈ ವೇಳೆ ಹೂವು ಕೆಳಕ್ಕೆ ಬಿದ್ದಿದೆ. ಕೂಡಲೇ ಪ್ರಧಾನಿ ಮೋದಿ ಆ ಹೂವನ್ನು ನೆಲದ ಮೇಲಿಂದ ಎತ್ತಿಕೊಂಡು ತಮ್ಮ ಭದ್ರತಾ ಸಿಬ್ಬಂದಿಯೊಬ್ಬರಿಗೆ ನೀಡಿದ್ದಾರೆ. ಪ್ರಧಾನಿ ಮೋದಿ ಅವರ ಸಮಯ ಪ್ರಜ್ಞೆಗೆ ನೆಟಿಜನ್ಗಳು ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇದು ಅವರ ಸ್ವಚ್ಛ ಭಾರತ ಅಭಿಯಾನದ ಸಂಕೇತವಾಗಿರಬುದೇನೋ ಅಂತಾ ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸಾವಿರಾರು ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡಾ ಭಾಗವಹಿಸುತ್ತಿದ್ದಾರೆ.