ಕರ್ನಾಟಕ

karnataka

ETV Bharat / bharat

ಡಬಲ್ ಡೆಕ್ಕರ್ ಬಸ್​ಗೆ ಬೆಂಕಿ: ಓರ್ವ ಸಜೀವ ದಹನ, ಮೂವರ ಸ್ಥಿತಿ ಗಂಭೀರ - ಡಬಲ್ ಡೆಕ್ಕರ್ ಬಸ್​ಗೆ ಬೆಂಕಿ

ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಬಸ್​ ಬೆಂಕಿಗಾಹುತಿಯಾಗಿದೆ. ಓರ್ವ ಪ್ರಯಾಣಿಕ ಸಜೀವ ದಹನವಾಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

double decker bus caught fire on expressway in firozabad
ಡಬಲ್ ಡೆಕ್ಕರ್ ಬಸ್​ಗೆ ಬೆಂಕಿ

By

Published : Aug 16, 2020, 11:01 AM IST

ಫಿರೋಜಾಬಾದ್: ಡಬಲ್ ಡೆಕ್ಕರ್ ಬಸ್ ಬೆಂಕಿಗಾಹುತಿಯಾಗಿ ಓರ್ವ ಪ್ರಯಾಣಿಕ ಸಜೀವ ದಹನವಾಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್​ನಲ್ಲಿ ನಡೆದಿದೆ.

ಬಿಹಾರದಿಂದ ಗುಜರಾತ್‌ಗೆ ತೆರಳುತ್ತಿದ್ದ ಬಸ್​ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಬಳಿಕ ಬೆಂಕಿ ಕಾಣಿಸಿಕೊಂಡಿದೆ. ಕೆಲ ಪ್ರಯಾಣಿಕರು ಬಸ್‌ನಿಂದ ಹಾರಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ.

ಬಸ್​ನಲ್ಲಿ ಒಟ್ಟು 72 ಪ್ರಯಾಣಿಕರಿದ್ದರು. ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ಸುರಕ್ಷಿತವಾಗಿದ್ದಾರೆ ಎಂದು ಫಿರೋಜಾಬಾದ್ (ಗ್ರಾಮೀಣ) ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ABOUT THE AUTHOR

...view details