ಕರ್ನಾಟಕ

karnataka

ETV Bharat / bharat

'ಜಮ್ಮು-ಕಾಶ್ಮೀರಕ್ಕೆ ಪ್ರವಾಸ ಬೇಡ': ಯುಕೆ,ಜರ್ಮನ್​,ಆಸ್ಟ್ರೇಲಿಯಾ ಸರ್ಕಾರ ಸೂಚನೆ

ಜಮ್ಮು-ಕಾಶ್ಮೀರಕ್ಕೆ ಪ್ರವಾಸ ಕೈಗೊಳ್ಳಬೇಡಿ ಎಂದು ಯುಕೆ, ಜರ್ಮನ್​ ಹಾಗೂ ಆಸ್ಟ್ರೇಲಿಯಾ ತನ್ನ ಪ್ರಜೆಗಳಿಗೆ ಸೂಚನೆ (Travel advisory )ನೀಡಿದೆ.

ಪ್ರವಾಸಿಗರಿಗೆ ಸೂಚನೆ/Germany, Australia issue travel advisory

By

Published : Aug 3, 2019, 7:35 PM IST

ನವದೆಹಲಿ:ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ಸಂಭವ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಸದ್ಯ ಅಲ್ಲಿಗೆ ಪ್ರವಾಸ ಕೈಗೊಳ್ಳಬೇಡಿ ಎಂದು ಕೆಲವು ರಾಷ್ಟ್ರಗಳು ತಮ್ಮ ಪ್ರಜೆಗಳಿಗೆ ಸೂಚನೆ ನೀಡಿವೆ.

ಇಂಗ್ಲೆಂಡ್, ಜರ್ಮನಿ ಹಾಗೂ ಆಸ್ಟ್ರೇಲಿಯಾದಲ್ಲಿರುವ ಟೂರಿಸ್ಟ್​​ ಸಂಸ್ಥೆಗಳಿಗೆ ಸೂಚಿಸಿರುವ ಅಲ್ಲಿನ ಸರ್ಕಾರಗಳು ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಜಮ್ಮು-ಕಾಶ್ಮೀರಕ್ಕೆ ಟೂರ್​ ಪ್ಲಾನ್ ಬೇಡ. ಜತೆಗೆ ನಿಮ್ಮಲ್ಲಿಗೆ ಬರುವ ಪ್ರವಾಸಿಗರಿಗೂ ಈ ಮಾಹಿತಿ ನೀಡಿ ಎಂದಿವೆ.

ಶುಕ್ರವಾರ ಏಕಾಏಕಿಯಾಗಿ ಅಮರನಾಥ​ ಯಾತ್ರೆಯನ್ನ ಭಾರತ ಗೃಹ ಇಲಾಖೆ ರದ್ದು ಮಾಡಿದ್ದು, ಅನೇಕ ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಜತೆಗೆ ಗಡಿಯಲ್ಲಿ ಕೆಲವು ಆತಂಕಕಾರಿ ಘಟನೆಗಳು ನಡೆಯುತ್ತಿರುವುದು ಸಹಜವಾಗಿಯೇ ಈ ದೇಶಗಳ ಆತಂಕಕ್ಕೆ ಪುಷ್ಠಿ ನೀಡಿದೆ. ನವದೆಹಲಿಯಲ್ಲಿರುವ ಬ್ರಿಟಿಷ್​ ಹೈಕಮಿಷನ್​ ಕೂಡ ಉತ್ತರ ತುದಿಯ ರಾಜ್ಯದಲ್ಲಿ ನಡೆಯುವ ಬೆಳವಣಿಗೆಗಳ ನಿಗಾ ಇಟ್ಟಿದೆ. ಜತೆಗೆ ಒಂದು ವೇಳೆ ಪ್ರವಾಸಿಗರು ಜಮ್ಮು-ಕಾಶ್ಮೀರದಲ್ಲಿ ವಾಸವಾಗಿದ್ದರೆ ತಕ್ಷಣವೇ ದೇಶಕ್ಕೆ ವಾಪಸಾಗುವಂತೆ ಯುಕೆ ಸರ್ಕಾರ ತಿಳಿಸಿದೆ.

ABOUT THE AUTHOR

...view details