ಪಣಜಿ (ಗೋವಾ):ಗೋವಾ ವಿಮಾನ ನಿಲ್ದಾಣದಿಂದ ನವದೆಹಲಿಗೆ ಪ್ರಯಾಣ ಬೆಳೆಸಬೇಕಿದ್ದ ಏರ್ ಏಷಿಯಾ ವಿಮಾನ ಟೇಕಾಫ್ ಆಗಲು ತಯಾರಾಗಿತ್ತು. ಆದರೆ, ನಾಯಿಯೊಂದು ರನ್ವೇಗೆ ಬಂದು ಟೇಕಾಫ್ಗೆ ಅಡ್ಡಿ ಉಂಟುಮಾಡಿದೆ.
ರನ್ವೇಗೆ ಅಡ್ಡ ಬಂದ ನಾಯಿ.. ಹಾರೋಕಾಗದೇ 40 ನಿಮಿಷ ನಿಂತಲ್ಲೇ ನಿಂತಿದ್ದ ವಿಮಾನ - goa airport
ರನ್ವೇಯಲ್ಲಿ ಟೇಕಾಫ್ ಆಗಲು ತಯಾರಾಗಿ ನಿಂತಿದ್ದ ವಿಮಾನಕ್ಕೆ ನಾಯಿಯೊಂದು ಅಡ್ಡ ಬಂದಿರುವ ಘಟನೆ ನಡೆದಿದೆ. ಭಾರತೀಯ ಸೇನೆ ವಕ್ತಾರ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
goa
ಬೆಳಗ್ಗೆ 8.25ಕ್ಕೆ ಫ್ಲೈಟ್ ಐ5778 ಟೇಕಾಫ್ ಆಗಬೇಕಿತ್ತು ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಆದರೆ, ಏರ್ ಟ್ರಾಫಿಕ್ ಕಂಟ್ರೋಲ್ ಸಿಬ್ಬಂದಿ ರನ್ವೇಯಲ್ಲಿ ಬೀದಿ ನಾಯಿಯನ್ನು ನೋಡಿದ್ದು, ತಕ್ಷಣ ಅಲ್ಲಿಂದ ನಾಯಿಯನ್ನು ಹೊರಗಡೆ ಕಳುಹಿಸಿದ್ದಾರೆ. ಬಳಿಕ 9.15ಕ್ಕೆ ವಿಮಾನ ಟೇಕಾಫ್ ಆಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ನಾಯಿ ಅಡ್ಡ ಬಂದಿದ್ದರಿಂದ ವಿಮಾನವು 40 ನಿಮಿಷ ತಡವಾಗಿ ಟೇಕಾಫ್ ಆಗಿದೆ.