ಕರ್ನಾಟಕ

karnataka

ETV Bharat / bharat

ವೈದ್ಯ ದಂಪತಿಯಲ್ಲಿ ಕೋವಿಡ್-19 ದೃಢ... ಕ್ವಾರಂಟೈನ್​​​ನಲ್ಲಿ ನರ್ಸಿಂಗ್ ಹೋಂ ಸಿಬ್ಬಂದಿ

ಖಾಸಗಿ ನರ್ಸಿಂಗ್ ಹೋಂನ ವೈದ್ಯ ದಂಪತಿಗೆ ಕೋವಿಡ್-19 ದೃಢಪಟ್ಟಿದ್ದು, 24 ಸಿಬ್ಬಂದಿಯನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿದೆ.

corona
corona

By

Published : May 11, 2020, 11:58 AM IST

ಮಥುರಾ:ಇಲ್ಲಿನ ಖಾಸಗಿ ನರ್ಸಿಂಗ್ ಹೋಂನ ವೈದ್ಯ ದಂಪತಿಗೆ ಕೋವಿಡ್-19 ದೃಢಪಟ್ಟ ಹಿನ್ನೆಲೆ 24 ಸಿಬ್ಬಂದಿಯನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿದೆ.

ಪರೀಕ್ಷಾ ವರದಿ ಪಾಸಿಟಿವ್ ಎಂದು ಬಂದ ಕೂಡಲೇ ಇತರ ಸಿಬ್ಬಂದಿಯನ್ನು ಕೃಷ್ಣ ಕುಟೀರ್ ಕ್ವಾರಂಟೈನ್​ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸರ್ವಜ್ಞ ರಾಮ್ ಮಿಶ್ರಾ ತಿಳಿಸಿದ್ದಾರೆ.

ವೈದ್ಯ ದಂಪತಿಗಳನ್ನು ಚಿಕಿತ್ಸೆಗಾಗಿ ಕೆ.ಡಿ. ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ನರ್ಸಿಂಗ್ ಹೋಂ ಇರುವ ಕೋಸಿಕಲನ್‌ನ ಆರ್ಯ ನಗರ ಪ್ರದೇಶವನ್ನು ಸೀಲ್​ಡೌನ್ ಮಾಡಲಾಗಿದೆ.

ಆರೋಗ್ಯ ಇಲಾಖೆಯ ಸಿಬ್ಬಂದಿ ಮನೆ ಮನೆಗೆ ತೆರಳಿ ಸಮೀಕ್ಷೆ ಆರಂಭಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ABOUT THE AUTHOR

...view details