ಹೈದರಾಬಾದ್(ತೆಲಂಗಾಣ): ಕೊರೊನಾ ವೈರಸ್ ರೋಗದಿಂದ ಸಾವನ್ನಪ್ಪಿದ್ದ ರೋಗಿಯ ಸಂಬಂಧಿಕನೊಬ್ಬ ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆ, ಹೈದರಾಬಾದ್ ಗಾಂಧಿ ಆಸ್ಪತ್ರೆಯ ಮುಂಭಾಗದಲ್ಲಿ ವೈದ್ಯರು ನಿನ್ನೆ ರಾತ್ರಿ ಪ್ರತಿಭಟನೆ ನಡೆಸಿದ್ದಾರೆ.
ಶನಿವಾರ ರಾತ್ರಿ 55 ವರ್ಷದ ವ್ಯಕ್ತಿಯೊಬ್ಬನನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರದಂದು ಕೋವಿಡ್-19 ಗೆ ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಈ ನಿಟ್ಟಿನಲ್ಲಿ ರೋಗಿಯನ್ನು ತೀವ್ರ ನಿಘಾ ಘಟಕದಲ್ಲಿರಿಸಿ ಆರೈಕೆ ಮಾಡಲಾಗಿತ್ತು. ರೋಗಿಗೆ ಸಿಪಿಎಪಿ ಯಂತ್ರದ ಮೂಲಕ ಕೃತಕ ಉಸಿರಾಟಕ್ಕೆ ವ್ಯವಸ್ಥೆ ಮಾಡಿ ಅದನ್ನು ತೆಗೆಯದಂತೆ ಸೂಚಿಸಲಾಗಿತ್ತು. ಆದರೆ, ವೈದ್ಯರ ಮಾತು ಕೇಳದ ರೋಗಿ, ಅದನ್ನು ತೆಗೆದು ಹೊರ ನಡೆದಿದ್ದ. ಈ ವೇಳೆ, ಉಸಿರಾಟದ ಸಮಸ್ಯೆಯಿಂದಾಗಿ ಅಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ.