ಪನ್ನಾ(ಮಧ್ಯಪ್ರದೇಶ): ಪನ್ನಾ ಜಿಲ್ಲೆಯ ವಜ್ರದ ಗಣಿಯೊಂದರಲ್ಲಿ 30ರಿಂದ 35 ಲಕ್ಷ ಮೌಲ್ಯದ ಮೂರು ವಜ್ರಗಳು ಪತ್ತೆಯಾಗಿದ್ದು, ಕಾರ್ಮಿಕನೋರ್ವ ರಾತ್ರೋರಾತ್ರಿ ಮಿಲಿಯನೇರ್ ಆಗಿದ್ದಾನೆ.
ಮಧ್ಯಪ್ರದೇಶದ ಅಧಿಕಾರಿಗಳು ಮಾಹಿತಿ ನೀಡಿರುವ ಪ್ರಕಾರ, ಗಣಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾರ್ಮಿಕನಿಗೆ 7.5 ಕ್ಯಾರೆಟ್ ತೂಕದ ಮೂರು ವಜ್ರ ಸಿಕ್ಕಿದ್ದಾಗಿ ತಿಳಿಸಿದ್ದಾರೆ.