ಕರ್ನಾಟಕ

karnataka

ETV Bharat / bharat

ಡಿಜಿಟಲ್​ ಪೇಮೆಂಟ್​ಗೆ ಹೆಚ್ಚಿನ ಒತ್ತು... ಸಕ್ಸಸ್​ ಆಗುತ್ತಾ ಮೋದಿ ಪ್ಲಾನ್​!? - budget

ಡಿಜಿಟಲ್​ ಮನಿ ಬಳಕೆ ಹಾಗೂ ವ್ಯವಹಾರಕ್ಕೆ ಉತ್ತೇಜನ ನೀಡಲು ಹೆಚ್ಚು ಆದ್ಯತೆ ನೀಡುತ್ತಿರುವ ಕೇಂದ್ರ ಸರ್ಕಾರ ಹಲವು ದಿಟ್ಟ ಕ್ರಮಗಳನ್ನ ಕೈಗೊಂಡಿದೆ.

ದೇಶದ ಆರ್ಥಿಕತೆ

By

Published : Jul 5, 2019, 3:42 PM IST

ನವದೆಹಲಿ: ದೇಶದ ಆರ್ಥಿಕತೆಯಲ್ಲಿ ನಗದು ಪ್ರಮಾಣ ಕಡಿಮೆ ಮಾಡಬೇಕು. ಇದು ಪ್ರಧಾನಿ ನರೇಂದ್ರ ಮೋದಿ ಅವರ ಬಹು ದಿನಗಳ ಕನಸು. ಆ ದಿಸೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಮೋದಿ ಹಲವು ದಿಟ್ಟ ಕ್ರಮಗಳನ್ನ ಕೈಗೊಂಡಿದ್ದಾರೆ.

ಡಿಜಿಟಲ್​ ಮನಿ ಬಳಕೆ ಹಾಗೂ ವ್ಯವಹಾರಕ್ಕೆ ಉತ್ತೇಜನ ನೀಡಲು ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಇಂದು ನಿರ್ಮಲಾ ಸೀತಾರಾಮನ್​ ಮಂಡಿಸಿದ ಬಜೆಟ್​ನಲ್ಲಿ ಹಲವು ಪೂರಕ ಕ್ರಮಗಳನ್ನ ಕೈಗೊಳ್ಳಲಾಗಿದೆ.

ಲೆಸ್​​ ಕ್ಯಾಶ್ ಇಕಾನಮಿ ( ಕಡಿಮೆ ಹಣದ ಬಳಕೆ) ಉತ್ತೇಜಿಸಲು ವಾರ್ಷಿಕ 1 ಕೋಟಿಗಿಂತ ಹೆಚ್ಚಿನ ಹಣವನ್ನ ಬ್ಯಾಂಕ್​ನಿಂದ ಡ್ರಾ ಮಾಡುವವರ ಮೇಲೆ ಶೇ 2ರಷ್ಟು ಲೆವಿ ( ಟಿಡಿಎಸ್​) ಹಾಕುವ ಘೋಷಣೆ ಮಾಡಿದ್ದಾರೆ.

ಇನ್ನು ಭೀಮ್​​​​, ಯುಪಿಐ, ಯುಪಿಐ ಕ್ಯೂ ಆರ್​ ಕೋಡ್​​, ಆಧಾರ್​ ಪೇ, ಡೆಬಿಟ್​ ಕಾರ್ಡ್​, ನೆಫ್ಟ್​​, ಆರ್​ಟಿಜಿಎಸ್​ಗಳ ಮೇಲಿನ ನಿರ್ವಹಣಾ ಶುಲ್ಕ ಕಡಿಮೆ ಆಗಲಿದೆ.

ಸಣ್ಣ ಉದ್ಯಮಿಗಳು ಸುಮಾರು ವಾರ್ಷಿಕ 50 ಕೋಟಿ ರೂ ವರೆಗಿನ ಹಣ ವರ್ಗಾವಣೆಯನ್ನ ಕಡಿಮೆ ಶುಲ್ಕದಲ್ಲಿ ನಿರ್ವಹಿಸಬಹುದು. ಈ ಸಂಬಂಧ ಈಗಿರುವ ಕಾನೂನಿಗೆ ಅಗತ್ಯ ಬದಲಾವಣೆ ತರಲು ತಿದ್ದುಪಡಿ ವಿಧೇಯಕ ಮಂಡಿಸಿ ಅನುಮೋದನೆ ಪಡೆಯಲು ಸರ್ಕಾರ ನಿರ್ಧರಿಸಿದೆ.

ABOUT THE AUTHOR

...view details