ಸೂರತ್ (ಗುಜರಾತ್):ಕೋವಿಡ್-19 ಹಿನ್ನೆಲೆಯಲ್ಲಿ ಸೂರತ್‌ನ ವಜ್ರ ಉದ್ಯಮವನ್ನು ಮುಚ್ಚಲು ಈ ಹಿಂದೆ ಸಲಹೆಗಳು ವ್ಯಕ್ತವಾಗಿದ್ದವು. ಹೊಸ ಮಾನದಂಡಗಳ ಪ್ರಕಾರ ವಜ್ರೋದ್ಯಮ ಮುಂದುವರಿಯಲಿದೆ ಎಂದು ಸೋಮವಾರ ಗುಜರಾತ್ ಪ್ರದೇಶದ ರತ್ನ ಮತ್ತು ಆಭರಣ ರಫ್ತು ಉತ್ತೇಜನ ಮಂಡಳಿಯ ಅಧ್ಯಕ್ಷ ದಿನೇಶ್ ನವಡಿಯಾ ತಿಳಿಸಿದ್ದಾರೆ.
ಸೂರತ್‌ನ ವಜ್ರ ಉದ್ಯಮವು ಹೊಸ ಮಾನದಂಡಗಳೊಂದಿಗೆ ಶುರು: ನವಡಿಯಾ ವಿಶ್ವಾಸ - ಸೂರತ್
ಸೂರತ್‌ನ ವಜ್ರ ಉದ್ಯಮವು ಹೊಸ ಸುರಕ್ಷತಾ ಮಾನದಂಡಗಳೊಂದಿಗೆ ಮುಂದುವರಿಯಲಿದೆ ಎಂದು ಸೋಮವಾರ ಗುಜರಾತ್ ಪ್ರದೇಶದ ರತ್ನ ಮತ್ತು ಆಭರಣ ರಫ್ತು ಉತ್ತೇಜನ ಮಂಡಳಿ ಅಧ್ಯಕ್ಷ ದಿನೇಶ್ ನವಡಿಯಾ ಹೇಳಿದ್ದಾರೆ.
ವಜ್ರ ಉದ್ಯಮವು ಹೊಸ ಮಾನದಂಡಗಳೊಂದಿಗೆ ಮುಂದುವರಿಯಲಿದೆ
ಕೋವಿಡ್-19ನ್ನು ಗಮನದಲ್ಲಿಟ್ಟುಕೊಂಡು ಒಂದು ವಾರ ಸೂರತ್‌ನಲ್ಲಿ ಉದ್ಯಮವನ್ನು ಮುಚ್ಚುವ ಸಲಹೆಗಳಿವೆ. ಆದರೆ, ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಹಲವಾರು ಮಾನದಂಡಗಳನ್ನು ಅಂತಿಮಗೊಳಿಸಲಾಗಿದೆ. ಈ ಮಾನದಂಡಗಳ ಆಧಾರದ ಮೇಲೆ ವಜ್ರ ಉದ್ಯಮವು ಮುಂದುವರಿಯುತ್ತದೆ ಎಂದು ನವಡಿಯಾ ತಿಳಿಸಿದ್ದಾರೆ.
ಈ ಬಾರಿ ಕೋವಿಡ್ ವಜ್ರಾಭರಣ ಉದ್ಯಮಕ್ಕೆ ಭಾರೀ ಪೆಟ್ಟು ನೀಡಿದೆ. ಹೀಗಾಗಿ ಸೂರತ್ ತನ್ನ ಹಳೆ ಛಾಪು ಕಳೆದುಕೊಳ್ಳುತ್ತದೆ ಎಂಬ ಭೀತಿ ಸಹ ಸೃಷ್ಟಿಯಾಗಿದೆ. ಇವೆಲ್ಲ ಅಡೆತಡೆಗಳ ಮಧ್ಯ ತನ್ನ ಗತವೈಭವ ಕಾಪಾಡಿಕೊಳ್ಳಲು ಉದ್ಯಮಿಗಳು ಪ್ರಯತ್ನ ಮುಂದುವರಿಸಿದ್ದಾರೆ.