ಕರ್ನಾಟಕ

karnataka

ETV Bharat / bharat

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್​ರ ಬೆಂಗಾವಲು ವಾಹನಕ್ಕೆ ಶಾಸಕರ ಕಾರು ಡಿಕ್ಕಿ - ಧರ್ಮೇಂದ್ರ ಪ್ರಧಾನ್

ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ಬಚಾ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂದಿರುಗುವಾಗ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್​ ಅವರ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದೆ.

Dharmedra Pardhan's convoy meets with minor accident
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್​ರ ಬೆಂಗಾವಲು ವಾಹನಕ್ಕೆ ಶಾಸಕರ ಕಾರು ಡಿಕ್ಕಿ

By

Published : Jan 19, 2021, 2:05 PM IST

ಬೆತುಲ್ (ಮಧ್ಯಪ್ರದೇಶ):ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಬೆಂಗಾವಲು ವಾಹನಕ್ಕೆ ಮಧ್ಯಪ್ರದೇಶದ ಆಮ್ಲಾ ಕ್ಷೇತ್ರದ ಶಾಸಕರ ಕಾರು ಡಿಕ್ಕಿ ಹೊಡೆದಿದೆ.

ಘೋರಡೋಂಗ್ರಿ ತಾಲೂಕಿನ ಬಚಾ ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಧರ್ಮೇಂದ್ರ ಪ್ರಧಾನ್ ಹಿಂದಿರುಗುವಾಗ ನೀಮ್​ಪಾನಿ ಎಂಬ ಪ್ರದೇಶದಲ್ಲಿ ಸಚಿವರ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದೆ.

ಇದನ್ನೂ ಓದಿ: ಲಾರಿ-ಟಂಟಂ ನಡುವೆ ಮುಖಾಮುಖಿ ಡಿಕ್ಕಿ: ಓರ್ವ ಸ್ಥಳದಲ್ಲೇ ಸಾವು

ಘಟನೆಯಲ್ಲಿ ಸಚಿವರು ಅಪಾಯದಿಂದ ಪಾರಾಗಿದ್ದಾರೆ. ಆದರೆ ಆಮ್ಲಾ ಶಾಸಕರ ಸಹಾಯಕ ಅರ್ಪಾನ್ ತ್ರಿವೇದಿಗೆ ಸಣ್ಣಪುಟ್ಟ ಗಾಯಗಳಾಗಿದೆ.

ABOUT THE AUTHOR

...view details