ಕರ್ನಾಟಕ

karnataka

ETV Bharat / bharat

ಅಭಿವೃದ್ಧಿ, ನಂಬಿಕೆ, ದೊಡ್ಡ ಬದಲಾವಣೆಯೇ 100 ದಿನದ ಸಾಧನೆ: ಪ್ರಧಾನಿ ಮೋದಿ - ಸಂಸತ್ತಿನ ಅಧಿವೇಶನ

ಕಳೆದ 100 ದಿನಗಳಲ್ಲಿ ನಾವು ತೆಗೆದುಕೊಂಡ ಪ್ರತೀ ನಿರ್ಧಾರದ ಹಿಂದೆ 130 ಕೋಟಿ ಜನರ ಸ್ಫೂರ್ತಿ ಇದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ನರೇಂದ್ರ ಮೋದಿ, ಪ್ರಧಾನ ಮಂತ್ರಿ

By

Published : Sep 8, 2019, 8:13 PM IST

ರೊಹ್ಟಕ್:ಅಭಿವೃದ್ಧಿ, ನಂಬಿಕೆ ಮತ್ತು ದೇಶದಲ್ಲಿನ ದೊಡ್ಡ ಬದಲಾವಣೆಯೇ ಕೇಂದ್ರ ಸರ್ಕಾರದ 100 ದಿನದ ಸಾಧನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ನರೇಂದ್ರ ಮೋದಿ, ಪ್ರಧಾನಮಂತ್ರಿ

ಹರಿಯಾಣದ ರೊಹ್ಟಕ್​ನಲ್ಲಿ ಚುನಾವಣಾ ರ‍್ಯಾಲಿಯನ್ನ ಉದ್ದೇಶಿಸಿ ಮಾತನಾಡಿದ ಮೋದಿ, ಈ ನೂರು ದಿನಗಳಲ್ಲಿ ಕೃಷಿ ಮತ್ತು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಲವು ದಿಟ್ಟ ನಿರ್ಧಾರಗಳನ್ನ ಕೈಗೊಂಡಿದೆ ಎಂದಿದ್ದಾರೆ.

ಈ 100 ದಿನಗಳಲ್ಲಿ ನಾವು ತೆಗೆದುಕೊಂಡ ಪ್ರತೀ ನಿರ್ಧಾರದ ಹಿಂದೆ 130 ಕೋಟಿ ಜನರ ಸ್ಫೂರ್ತಿ ಇದೆ. ಕಳೆದ 60 ವರ್ಷಗಳಲ್ಲಿ ಯಾವುದೇ ಸಂಸತ್ತಿನ ಅಧಿವೇಶನದಲ್ಲಿ ಮಾಡಲಾಗದಷ್ಟು ಕೆಲಸವನ್ನ ಈ ಅಧಿವೆಶನದಲ್ಲಿ ಮಾಡಲಾಗಿದೆ. ಇಂತಹ ದಾಖಲೆಯ ಕೆಲಸ ಮಾಡಿದ್ದಕಾಗಿ ಪ್ರತಿಯೊಂದು ಪಕ್ಷಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ.

ABOUT THE AUTHOR

...view details