ನವದೆಹಲಿ:ಅಗತ್ಯ ಮೂಲ ಸೌಲಭ್ಯಗಳಾದ ಒಳಚರಂಡಿ, ಕೊಳವೆಗಳ ಮೂಲಕ ನೀರಿನ ಪೂರೈಕೆ ವ್ಯವಸ್ಥೆ ಮತ್ತು ವಿದ್ಯುತ್ ಸಂಪರ್ಕವನ್ನು ರಿಯಲ್ ಎಸ್ಟೇಟ್ ಡೆವಲಪರ್ಸ್ ಒದಗಿಸಿದ್ದಾರೆ ಎಂದಾದರೆ ಅಂತಹ ಜಮೀನುಗಳ ಮಾರಾಟ ದರದ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸಲಾಗುವುದು ಎಂದು ಅಥಾರಿಟಿ ಆಫ್ ಅಡ್ವಾನ್ಸ್ ರೂಲಿಂಗ್(ಎಎಆರ್) ತಿಳಿಸಿದೆ.
ಜಮೀನು ಮಾರಾಟಕ್ಕೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನ್ವಯವಾಗುವುದೇ? ಎಂದು ವ್ಯಕ್ತಿಯೊಬ್ಬರು ಗುಜರಾತ್ನ ಎಎಆರ್‌ನ ನ್ಯಾಯಪೀಠಕ್ಕೆ ಅರ್ಜಿ ಸಲ್ಲಿಸಿದ್ದರು.
ಅಭಿವೃದ್ಧಿ ಹೊಂದಿದ ಭೂಮಿ ಮಾರಾಟದ ಚಟುವಟಿಕೆಯನ್ನು 'ಸಂಕೀರ್ಣವನ್ನು ನಿರ್ಮಿಸಲು ಖರೀದಿದಾರರಿಗೆ ಮಾರಾಟ ಮಾಡಲು ಉದ್ದೇಶಿಸಲಾಗಿದೆ' ಎಂಬ ಷರತ್ತಿನ ವ್ಯಾಪ್ತಿಗೆ ಒಳಪಡಿಸಲಾಗುತ್ತದೆ. ಹೀಗಾಗಿ, ಈ ಚಟುವಟಿಕೆಯನ್ನು 'ನಿರ್ಮಾಣ ಸೇವೆಗಳ' ವ್ಯಾಪ್ತಿಗೆ ಒಳಪಡಿಸಲಾಗಿದೆ ಮತ್ತು ಅಭಿವೃದ್ಧಿ ಹೊಂದಿದ ಭೂಮಿ ಮಾರಾಟಕ್ಕೆ ಜಿಎಸ್‌ಟಿ ಅನ್ವಯವಾಗಲಿದೆ ಎಂದು ಎಎಆರ್ ಸ್ಪಷ್ಟವಾಗಿ ತಿಳಿಸಿದೆ.
ಎಎಂಆರ್ಜಿ & ಅಸೋಸಿಯೇಟ್ಸ್ ಹಿರಿಯ ಪಾಲುದಾರ ರಜತ್ ಮೋಹನ್ ನೀಡಿದ ಈ ತೀರ್ಪು ಇಡೀ ರಿಯಲ್ ಎಸ್ಟೇಟ್ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದು ಅಭಿವೃದ್ಧಿ ಹೊಂದಿದ ಫ್ಲಾಟ್‌ಗಳ ಮಾರಾಟಕ್ಕೆ ನೀಡಲಾಗುವ ತೆರಿಗೆ ವಿನಾಯಿತಿಯನ್ನು ಕಸಿದುಕೊಳ್ಳಲಿದೆ ಎಂದು ದೂರುದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.