ಕರ್ನಾಟಕ

karnataka

ETV Bharat / bharat

ಪತ್ನಿಗೆ ಕಿರುಕುಳ ಆರೋಪ... ಜಿಲ್ಲಾಧಿಕಾರಿಯನ್ನು ಬಂಧಿಸಿದ ಪೊಲೀಸರು - ಒಡಿಶಾ ಜಿಲ್ಲಾಧಿಕಾರಿಯಿಂದ ಪತ್ನಿಗೆ ಕಿರುಕುಳ

ಪತ್ನಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಜಿಲ್ಲಾಧಿಕಾರಿಯೊಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

Deputy Collector arrested for torturing wife in Odisha
ಪತ್ನಿಗೆ ಕಿರುಕುಳ ನೀಡಿದ ಜಿಲ್ಲಾಧಿಕಾರಿ

By

Published : Sep 30, 2020, 7:54 AM IST

ಭುವನೇಶ್ವರ(ಒಡಿಶಾ):ಪತ್ನಿಗೆ ಕಿರುಕುಳ ನೀಡುತ್ತಿದ್ದ ಆರೋಪದಲ್ಲಿ ಒಡಿಶಾದ ಬೌಧ್ ಜಿಲ್ಲೆಗೆ ನಿಯೋಜಸಲಾಗಿದ್ದ ಜಿಲ್ಲಾಧಿಕಾರಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಪತಿ ವಿರುದ್ಧ ಪತ್ನಿ ದೂರು ನೀಡಿದ ನಂತರ ಜಾರ್ಸುಗುಡಾ ಟೌನ್ ಪೊಲೀಸರು ಜಿಲ್ಲಾಧಿಕಾರಿ ಶರತ್ ಬ್ಯಾಗ್​ನನ್ನು ಬಂಧಿಸಿದ್ದಾರೆ.

ಜಿಲ್ಲಾಧಿಕಾರಿ ಶರತ್ ಬ್ಯಾಗ್ ವಿವಾಹದ ನಂತರ ಮತ್ತೊಬ್ಬ ಹುಡುಗಿಯ ಜೊತೆ ಸಂಬಂಧ ಬೆಳೆಸಿದ್ದಾರೆ ಎಂದು ಪತ್ನಿ ಆರೋಪಿಸಿದ್ದಾರೆ. ಅಲ್ಲದೆ ತಮ್ಮದೇ ಮನೆಯಲ್ಲಿ ಹುಡುಗಿಯೊಬ್ಬಳೊಂದಿಗೆ ಪತಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದೇನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಶರತ್ ಮತ್ತು ಅವರ ಸಹಚರರು ನನ್ನನ್ನು ಥಳಿಸಿ, ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ABOUT THE AUTHOR

...view details