ಕರ್ನಾಟಕ

karnataka

ETV Bharat / bharat

ದೆಹಲಿ ವಾಯು ಗುಣಮಟ್ಟದಲ್ಲಿ ಭಾರಿ ಸುಧಾರಣೆ; ಇದು ಲಾಕ್‌ಡೌನ್​ ಇಂಪ್ಯಾಕ್ಟ್

ಲಾಕ್​ಡೌನ್​ನಿಂದಾಗಿ ದೆಹಲಿಯ ವಾಯು ಗುಣಮಟ್ಟ ತೀವ್ರ ಮಟ್ಟದಲ್ಲಿ ಸುಧಾರಿಸುತ್ತಿದ್ದು, ಮಾಲಿನ್ಯ ಪ್ರಮಾಣದಲ್ಲಿ ಕುಸಿತವಾಗಿದೆ. ಮಂಗಳವಾರ ಬೆಳಿಗ್ಗೆ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ 88 ದಾಖಲಾಗಿದೆ. ಇದು ದೆಹಲಿಯ ಜನತೆಯ ಆರೋಗ್ಯ ಸುಧಾರಣೆಯಲ್ಲೂ ಸಕಾರಾತ್ಮಕ ಪರಿಣಾಮ ಬೀರಲಿದೆ.

Delhi pollution level decreases during lockdown
ದೆಹಲಿ ವಾಯುಗುಣಮಟ್ಟ

By

Published : May 5, 2020, 1:39 PM IST

ನವದೆಹಲಿ: ಕೊರೊನಾ ಭೀತಿಯಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಲಾಕ್‌ಡೌನ್ ವಿಧಿಸಲಾಗಿದೆ. ಇದರಿಂದಾಗಿ ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರ ಹೊರತಾಗಿಯೂ, ಲಾಕ್​ಡೌನ್ ಕೆಲವು ಸಕಾರಾತ್ಮಕ ಬದಲಾವಣೆಗಳನ್ನು ತಂದಿದೆ.

ದೆಹಲಿಯ ವಾಯುಗುಣಮಟ್ಟ ತೀವ್ರ ಮಟ್ಟದಲ್ಲಿ ಸುಧಾರಿಸುತ್ತಿದ್ದು, ಮಾಲಿನ್ಯ ಪ್ರಮಾಣದಲ್ಲಿ ತೀವ್ರ ಕುಸಿತವಾಗಿದೆ. ಮಂಗಳವಾರ ಬೆಳಿಗ್ಗೆ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ 88 ದಾಖಲಾಗಿದ್ದು, ಇದು ತೃಪ್ತಿಕರವೆಂದು ಪರಿಗಣಿಸಲಾಗಿದೆ.

ದೆಹಲಿ ವಾಯುಗುಣಮಟ್ಟ ವೃದ್ಧಿ

ಲಾಕ್​ಡೌನ್ ಸಮಯದಲ್ಲಿ ದೆಹಲಿಯಲ್ಲಿ ಮಾಲಿನ್ಯ ಕಡಿಮೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ಕಳೆದ ಹಲವು ದಿನಗಳಿಂದ ದೆಹಲಿಯಲ್ಲಿ ಜಾರಿಗೆ ತರಲಾದ ಲಾಕ್​ಡೌನ್​ನಿಂದಾಗಿ ಎಲ್ಲಾ ಕಾರ್ಖಾನೆಗಳು ಮುಚ್ಚಿವೆ. ಕಲುಷಿತ ಹೊಗೆಯ ಹೊರಸೂಸುವಿಕೆ ಪ್ರಮಾಣವೂ ಕಡಿಮೆಯಾಗಿದೆ. ರಸ್ತೆಗಳಲ್ಲಿ ವಾಹನಗಳ ಸಂಖ್ಯೆಯೂ ಕಡಿಮೆಯಾಗಿದ್ದು, ಇದರಿಂದಾಗಿ ದೆಹಲಿಯ ವಾಯುಗುಣಮಟ್ಟ ಸುಧಾರಿಸುತ್ತಿದೆ ಎಂದು ಹೇಳಿದ್ದಾರೆ.

ದೆಹಲಿ ವಾಯುಗುಣಮಟ್ಟದಲ್ಲಿ ಭಾರಿ ಸುಧಾರಣೆ

ಪ್ರದೇಶವಾರು ವಾಯು ಗುಣಮಟ್ಟ ಸೂಚ್ಯಂಕ:

  • ಅಶೋಕ್ ವಿಹಾರ್ 74
  • ಅಯಾ ನಗರ 86
  • ಮಥುರಾ ರಸ್ತೆ 96
  • ಡಿಟಿಯು 102
  • ದ್ವಾರಕಾ 100
  • ಜಹಾಂಗೀರ್‌ಪುರಿ 90
  • ಮಂದಿರ ಮಾರ್ಗ 78
  • ಮುಂಡ್ಕಾ 74
  • ನಜಫ್‌ನಗರ 85
  • ಉತ್ತರ ಕ್ಯಾಂಪಸ್ 99
  • ಓಖ್ಲಾ 80
  • ಪಾತ್ಪರ್​ಗಂಜ್​ 93
  • ರೋಹಿಣಿ 98

ABOUT THE AUTHOR

...view details