ಬಲರಾಂಪುರ (ಉತ್ತರ ಪ್ರದೇಶ): ದೆಹಲಿಯಲ್ಲಿ ಬಂಧಿಸಲ್ಪಟ್ಟ ಐಸಿಸ್ ಉಗ್ರ ಅಬು ಯೂಸುಫ್ನನ್ನು ಉತ್ತರ ಪ್ರದೇಶದಲ್ಲಿನ ಆತನ ಸ್ವಗ್ರಾಮದಲ್ಲಿಂದು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸ್ವಗ್ರಾಮದಲ್ಲಿ ಐಸಿಸ್ ಉಗ್ರನನ್ನ ವಶಕ್ಕೆ ಪಡೆದ ದೆಹಲಿ ಪೊಲೀಸರು - ದೆಹಲಿಯ ರಿಡ್ಜ್ ರಸ್ತೆ
ನಿನ್ನೆ ದೆಹಲಿಯಲ್ಲಿ ಬಂಧಿಸಲ್ಪಟ್ಟ ಐಸಿಸ್ ಉಗ್ರ ಅಬು ಯೂಸುಫ್ನನ್ನು ದೆಹಲಿಯಿಂದ ಉತ್ತರ ಪ್ರದೇಶದಲ್ಲಿನ ಆತನ ಸ್ವಗ್ರಾಮವಾದ ಬಾದ್ಯಾ ಭೈಸಾಹಿಗೆ ಕರೆತರಲಾಗಿತ್ತು. ಗ್ರಾಮದಲ್ಲಿ ತಪಾಸಣೆ ನಡೆಸಿದ ಬಳಿಕ ಮತ್ತೆ ಈಗ ಉಗ್ರನನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಿನ್ನೆ ದೆಹಲಿಯ ರಿಡ್ಜ್ ರಸ್ತೆಯ ಧೌಲಾ ಕುವಾನ್ ಪ್ರದೇಶದಲ್ಲಿ ವಿಶೇಷ ಪೊಲೀಸ್ ಘಟಕದ ಅಧಿಕಾರಿಗಳು ಅಬು ಯೂಸುಫ್ನನ್ನು ಬಂಧಿಸಿ, ಭಾರಿ ಪ್ರಮಾಣದ ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ವಶಪಡಿಸಿಕೊಂಡಿದ್ದರು. ಬಳಿಕ ಐಇಡಿಗಳನ್ನು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಎಸ್‌ಜಿ) ಕಮಾಂಡೋಗಳು ನಿಷ್ಕ್ರಿಯಗೊಳಿಸಿದ್ದರು.
ಯೂಸುಫ್ನನ್ನು ಬಂಧಿಸಿದ ವಿಶೇಷ ಪೊಲೀಸ್ ಘಟಕದ ಅಧಿಕಾರಿಗಳು, ದೆಹಲಿಯ ತಮ್ಮ ಕಚೇರಿಗೆ ಕರೆತಂದಿದ್ದರು. ವಿಚಾರಣೆ ವೇಳೆ ಆತ ಕೆಲವು ತಿಂಗಳ ಹಿಂದೆ ತನ್ನ ಗ್ರಾಮದಲ್ಲಿ ಸ್ಫೋಟಕಗಳ ಪರೀಕ್ಷೆ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಹೀಗಾಗಿ ಉಗ್ರ ಯೂಸುಫ್ನನ್ನು ದೆಹಲಿಯಿಂದ ಉತ್ತರ ಪ್ರದೇಶದಲ್ಲಿನ ಆತನ ಸ್ವಗ್ರಾಮವಾದ ಬಾದ್ಯಾ ಭೈಸಾಹಿಗೆ ಕರೆತರಲಾಗಿತ್ತು. ಗ್ರಾಮದಲ್ಲಿ ತಪಾಸಣೆ ನಡೆಸಿದ ಬಳಿಕ ಮತ್ತೆ ಈಗ ಉಗ್ರನನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.