ನವದೆಹಲಿ: ದೆಹಲಿಯಲ್ಲಿ ವಿಪರೀತವಾದ ಕೊರೊನಾ ಹಾವಳಿ ಹಿನ್ನೆಲೆ ಜಾಮಾ ಮಸೀದಿಯನ್ನ ಜೂನ್ 30 ರವರೆಗೆ ಬಂದ್ ಮಾಡಲಾಗಿದೆ. ಹೆಚ್ಚುತ್ತಿರುವ ವೈರಸ್ ಹಿನ್ನೆಲೆಯಲ್ಲಿ ಸಯ್ಯದ್ ಅಹ್ಮದ್ ಬುಕಾರಿ ಈ ನಿರ್ಧಾರ ಕೈಗೊಂಡಿದ್ದಾರೆ.
ಕೊರೊನಾ ಎಫೆಕ್ಟ್: ಮತ್ತೆ ಬಾಗಿಲು ಮುಚ್ಚಿದ ಜಾಮಾ ಮಸೀದಿ!
ಕೊರೊನಾ ಹಾವಳಿಯಿಂದ ದೆಹಲಿ ಅಕ್ಷರಶಃ ತತ್ತರಿಸಿದೆ. ಅಲ್ಲಿನ ಜನರಿಗೆ ವೈದಕೀಯ ಚಿಕಿತ್ಸೆ ನೀಡಲು ದೆಹಲಿ ಸರ್ಕಾರ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಜಾಮಾ ಮಸೀದಿಯ ಬಾಗಿಲು ಮುಚ್ಚಲಾಗಿದೆ.
ಜನರಿಗೆ ಬಾಗಿಲು ಮುಚ್ಚಿದ ಜಾಮಾ ಮಸೀದಿ
ಜೂನ್ 30ವರೆಗೂ ಮಸೀದಿಯಲ್ಲಿ ಯಾವುದೇ ಪ್ರಾರ್ಥನೆ ಇರುವುದಿಲ್ಲ ಎಂದು ಬುಕಾರಿ ಪ್ರಕಟಿಸಿದ್ದಾರೆ. ಇನ್ನು ಜನತಾ ದರ್ಶನಕ್ಕೂ ಅವಕಾಶ ಕಲ್ಪಿಸಲಾಗುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಅವರು ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಂಡಿದ್ದಾರೆ.
ಅತ್ತ ದೆಹಲಿ ಸರ್ಕಾರ ಹೆಚ್ಚುತ್ತಿರುವ ಸೋಂಕಿತರಿಗೆ ಚಿಕಿತ್ಸೆ ಕೊಡಿಸಲು ಹರಸಾಹಸ ಮಾಡಬೇಕಾದ ಸ್ಥಿತಿ ಎದಿರುಸುತ್ತಿದೆ.