ಕರ್ನಾಟಕ

karnataka

ETV Bharat / bharat

ಅಕ್ಟೋಬರ್​ 14ಕ್ಕೆ ಡಿಕೆಶಿ ಅರ್ಜಿ ವಿಚಾರಣೆ ನಿಗದಿ: ತಮಗೆ ಇಡಿ ನೋಟಿಸ್​ ಬಂದಿಲ್ಲ ಎಂದ ಡಿಕೆ ಸುರೇಶ್​ - ಅಕ್ರಮ ಹಣ ವರ್ಗಾವಣೆ

ಡಿ.ಕೆ. ಶಿವಕುಮಾರ್​ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನ ಅಕ್ಟೋಬರ್​ 14ರಂದು ಕೈಗೆತ್ತಿಕೊಳ್ಳುವುದಾಗಿ ದೆಹಲಿ ಹೈಕೋರ್ಟ್ ತಿಳಿಸಿದೆ

ಡಿ.ಕೆ. ಶಿವಕುಮಾರ್

By

Published : Sep 30, 2019, 11:47 AM IST

Updated : Sep 30, 2019, 3:04 PM IST

ನವದೆಹಲಿ:ಅಕ್ರಮ ಹಣ ವರ್ಗಾವಣೆ ಸಂಬಂಧ ತಿಹಾರ್​ ಜೈಲು ಸೇರಿರುವ ಕಾಂಗ್ರೆಸ್​ ನಾಯಕ ಡಿ.ಕೆ. ಶಿವಕುಮಾರ್​ ಅವರ ಜಾಮೀನು ಅರ್ಜಿ ಸಂಬಂಧ ಜಾರಿ ನಿರ್ದೇಶನಾಲಯಕ್ಕೆ ದೆಹಲಿ ಹೈಕೋರ್ಟ್​ ನೋಟಿಸ್​ ನೀಡಿದೆ.

ಅರ್ಜಿ ವಿಚಾರಣೆಯನ್ನು ಅಕ್ಟೋಬರ್​ 14ರಂದು ಕೈಗೆತ್ತಿಕೊಳ್ಳುವುದಾಗಿ ನ್ಯಾಯಮೂರ್ತಿ ಸುರೇಶ್​ ಕುಮಾರ್​ ಕಾಯಿತ್​ ಅವರು ತಿಳಿಸಿದ್ದಾರೆ.

ದೆಹಲಿಯ ಫ್ಲ್ಯಾಟ್​ವೊಂದರಲ್ಲಿ ಪತ್ತೆಯಾಗಿದ್ದ ಅಕ್ರಮ ಹಣವು ಡಿ.ಕೆ.ಶಿವಕುಮಾರ್​ ಅವರಿಗೆ ಸೇರಿದ್ದು ಎನ್ನಲಾಗುತ್ತಿದ್ದು, ಈ ಸಂಬಂಧ ಡಿಕೆಶಿ ಅವರನ್ನು ಬಂಧಿಸಲಾಗಿತ್ತು.

ಡಿಕೆ ಸುರೇಶ್​​ಗೂ ಇಡಿ ನೋಟಿಸ್​ -ತಮಗೆ ಯಾವುದೇ ನೋಟಿಸ್​ ಬಂದಿಲ್ಲ ಡಿಕೆಸು ಸ್ಪಷ್ಟನೆ: ಈ ಮಧ್ಯೆ ಲೋಕಸಭಾ ಸದಸ್ಯ ಡಿಕೆಶಿ ಸಹೋದರ ಡಿ.ಕೆ. ಸುರೇಶ್​ಗೆ ಇಡಿ ನೋಟಿಸ್​ ಜಾರಿ ಮಾಡಿದೆ ಎನ್ನಲಾಗಿದೆ. ಆದರೆ ತಮಗೆ ಯಾವುದೇ ಇಡಿ ನೋಟಿಸ್​ ದೆಹಲಿಯಲ್ಲಿ ಹೇಳಿಕೆ ನೀಡಿ ಸ್ಪಷ್ಟನೆ ನೀಡಿದ್ದಾರೆ. ಪ್ಲಾಟ್​​ ನಲ್ಲಿ ಸಿಕ್ಕ ಹಣದಲ್ಲಿ ಸುಮಾರು 21 ಲಕ್ಷ ಹಣ ನನಗೆ ಸೇರಿದ್ದು ಎಂದು ಡಿಕೆ ಸುರೇಶ್​ ಹೇಳಿಕೆ ಹಿನ್ನೆಲೆಯಲ್ಲಿ ಇಡಿ ಈ ನೋಟಿಸ್​ ಜಾರಿ ಮಾಡಲಾಗಿದೆ ಎಂದು ಹೇಳಲಾಗಿತ್ತು.

ಈ ಮೊದಲು ಡಿ ಕೆ ಶಿವಕುಮಾರ್ ಪುತ್ರಿ ಐಶ್ವರ್ಯಳನ್ನ ಇಡಿ ನವದೆಹಲಿಗೆ ಕರೆಯಿಸಿಕೊಂಡು ವಿಚಾರಣೆ ನಡೆಸಿತ್ತು. ಇದಾದ ಬಳಿಕ ವಿಧಾನಸಭೆ ಸದಸ್ಯ ಲಕ್ಷ್ಮಿ ಹೆಬ್ಬಾಳ್ಕರ್​ ಅವರನ್ನೂ ಇಡಿ ಎರಡು ದಿನ ವಿಚಾರಣೆಗೆ ಒಳಪಡಿಸಿತ್ತು.

Last Updated : Sep 30, 2019, 3:04 PM IST

ABOUT THE AUTHOR

...view details