ನವದೆಹಲಿ: ಕೇಂದ್ರದ ಕ್ರಮವನ್ನು ಅನುಸರಿಸಿರುವ ದೆಹಲಿ ಸರ್ಕಾರ ಜುಲೈ 2021ರವರೆಗೆ ಸುಮಾರು 2.2 ಲಕ್ಷ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ವಿವಿಧ ಭತ್ಯೆಗಳನ್ನು ತಡೆಹಿಡಿದಿದೆ.
ನೌಕರರು, ಪಿಂಚಣಿದಾರರ ವಿವಿಧ ಭತ್ಯೆ ತಡೆಹಿಡಿದ ದೆಹಲಿ ಸರ್ಕಾರ - ಹೆಚ್ಚುವರಿ ಭತ್ಯೆ
ಸುಮಾರು 2.2 ಲಕ್ಷ ನೌಕರರು ಮತ್ತು ಪಿಂಚಣಿದಾರರ ವಿವಿಧ ಭತ್ಯೆಗಳನ್ನು 2021 ಜುಲೈವರೆಗೆ ತಡೆಹಿಡಿಯಲು ದೆಹಲಿ ಸರ್ಕಾರ ನಿರ್ಧರಿಸಿದೆ. ಆ ಹಣವನ್ನು ಕೋವಿಡ್ ಪರಿಹಾರ ಕಾರ್ಯಗಳಿಗೆ ಬಳಸಲು ತೀರ್ಮಾನಿಸಿದೆ.
2020 ರ ಜನವರಿಯಿಂದ ನೌಕರರಿಗೆ ಹೆಚ್ಚುವರಿ ಭತ್ಯೆ ಮತ್ತು ಪಿಂಚಣಿದಾರರಿಗೆ ಪರಿಹಾರ ಭತ್ಯೆ ನೀಡಬೇಕಿತ್ತು. ಆದರೆ, ಕೇಂದ್ರ ಸರ್ಕಾರದ ಆದೇಶಕ್ಕೆ ಅನುಮೋದನೆ ನೀಡಿರುವ ದೆಹಲಿ ಸರ್ಕಾರದ ಹಣಕಾಸು ಇಲಾಖೆ ಭತ್ಯೆಗಳನ್ನು ಜುಲೈ 2021ರವರೆಗೆ ತಡೆಹಿಡಿದಿದೆ.
ನೌಕರರು ಮತ್ತು ಪಿಂಚಣಿದಾರರ ಭತ್ಯೆಗಳನ್ನು ತಡೆಹಿಡಿದು ರಾಜಧಾನಿಯಲ್ಲಿ ಕೋವಿಡ್ ಪರಿಹಾರ ಕಾರ್ಯಗಳಿಗೆ ಬಳಸಲು ಸರ್ಕಾರ ನಿರ್ಧರಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ಸರ್ಕಾರದ ಈ ಕ್ರಮ ಸುಮಾರು 2.2 ಲಕ್ಷ ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ದೆಹಲಿ ಸರ್ಕಾರಿ ನೌಕರರ ಕಲ್ಯಾಣ ಸಂಘದ ಪ್ರಧಾನ ಕಾರ್ಯದರ್ಶಿ ಉಮೇಶ್ ಬಾತ್ರಾ ಹೇಳಿದ್ದಾರೆ