ಕರ್ನಾಟಕ

karnataka

ETV Bharat / bharat

ಕೊರೊನಾ ಗೆದ್ದ ಡೆಲ್ಲಿ ಡಿಸಿಎಂ: ಆಸ್ಪತ್ರೆಯಿಂದ ಸಿಸೋಡಿಯಾ ಡಿಸ್ಚಾರ್ಜ್​!

ಮಹಾಮಾರಿ ಕೊರೊನಾ ವೈರಸ್​ ಹಾಗೂ ಡೆಂಘೀ ಜ್ವರದಿಂದ ಬಳಲುತ್ತಿರುವ ದೆಹಲಿ ಉಪ ಮುಖ್ಯಮಂತ್ರಿ ಮನೀಷ್​ ಸಿಸೋಡಿಯಾ ಇದೀಗ ಪ್ಲಾಸ್ಮಾ ಥೆರೆಪಿಗೆ ಒಳಗಾಗಿದ್ದರು. ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಡಿಸ್ಚಾರ್ಜ್​ ಆಗಿದ್ದಾರೆ.

Deputy CM Manish Sisodia
Deputy CM Manish Sisodia

By

Published : Sep 29, 2020, 4:53 PM IST

ನವದೆಹಲಿ:ಮಹಾಮಾರಿ ಕೊರೊನಾ ವೈರಸ್​ ಜತೆಗೆ ಡೆಂಘೀ ಜ್ವರಕ್ಕೊಳಗಾಗಿ ಪ್ಲಾಸ್ಮಾ ಥೆರೆಪಿ ಮಾಡಿಸಿಕೊಂಡಿರುವ ದೆಹಲಿ ಉಪಮುಖ್ಯಮಂತ್ರಿ ಮನೀಷ್​ ಸಿಸೋಡಿಯಾ ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

ಸೆ.14ರಂದು ಕೊರೊನಾ ಸೋಂಕಿಗೊಳಗಾಗಿದ್ದ ಸಿಸೋಡಿಯಾಗೆ ಉಸಿರಾಟದ ತೊಂದರೆ ಹಾಗೂ ಜ್ವರ ಕಾಣಿಸಿಕೊಂಡಿದ್ದರಿಂದ ಸೆ.23ರಂದು ದೆಹಲಿಯ ಲೋಕ ನಾಯಕ್​​ ಜಯ ಪ್ರಕಾಶ್​​ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದಾದ ಬಳಿಕ ಡೆಂಘೀ ಜ್ವರ ಕಾಣಿಸಿಕೊಂಡಿದ್ದರಿಂದ ಸಾಂಕೇತ್​​ನಲ್ಲಿರುವ ಮ್ಯಾಕ್ಸ್​​ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು.

ಡೆಂಘೀ, ಕೊರೊನಾದಿಂದ ಬಳಲುತ್ತಿರುವ ಮನೀಷ್​ ಸಿಸೋಡಿಯಾಗೆ ಪ್ಲಾಸ್ಮಾ ಥೆರೆಪಿ!

ಸೆಪ್ಟೆಂಬರ್​​ 25ರಂದು ಪ್ಲಾಸ್ಮಾ ಥೆರೆಪಿಗೊಳಗಾಗಿದ್ದ ಅವರು ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಡಿಸ್ಚಾರ್ಜ್​ ಆಗಿದ್ದಾರೆ. ಮುಂದಿನ ಒಂದು ವಾರಗಳ ಕಾಲ ಮನೆಯಲ್ಲೇ ವಿಶ್ರಾಂತಿ ಪಡೆದುಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ABOUT THE AUTHOR

...view details