ನವದೆಹಲಿ :ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧದ ರೈತರ ದೆಹಲಿ ಚಲೋ ರ್ಯಾಲಿ ಈಗ ಸಿಂಗು ಗಡಿಯಲ್ಲಿದೆ. ತಮ್ಮ ಹೋರಾಟವನ್ನು ಬುರಾರಿಯ ನಿರಂಕರಿ ಮೈದಾನದಿಂದ ಮುಂದುವರಿಸುವ ಕುರಿತಂತೆ ಇಂದು ಸಭೆಯ ನಂತರ ನಿರ್ಧರಿಸಲಾಗುತ್ತದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ದೆಹಲಿ ಚಲೋ ರ್ಯಾಲಿ... ಜಗ್ಗದ, ಬಗ್ಗದ ರೈತರ ಹೋರಾಟ!
ಸಿಂಧೂ ಗಡಿಯಲ್ಲಿ ರೈತರ ಆಂದೋಲನ ಮುಂದುವರಿಯಲಿದೆಯೇ ಅಥವಾ ಅವರು ಬುರಾರಿಗೆ ತೆರಳಲಿದ್ದಾರೆಯೇ ಎಂಬುದು ಇಂದು ಸರ್ಕಾರದ ಜೊತೆ ನಡೆಯುವ ಸಭೆಯ ನಂತರ ನಿರ್ಧರವಾಗಲಿದೆ..
ಇತ್ತ ಹರಿಯಾಣದ ಸೋನಿಪತ್ ಮೂಲಕ ದೆಹಲಿ ಕಡೆಗೆ ಪ್ರಯಾಣಿಸುವ ರೈತರಿಗೆ ರಾಷ್ಟ್ರ ರಾಜಧಾನಿಗೆ ಪ್ರವೇಶಿಸಲು ಅನುಮತಿ ಸಿಕ್ಕಿದೆ. ಆದರೂ ರೈತರು ಇನ್ನೂ ಸಿಂಗು ಗಡಿಯಲ್ಲಿ ಸಿಲುಕಿದ್ದಾರೆ. ಬುರಾರಿಯ ನಿರಂಕರಿ ಮೈದಾನಕ್ಕೆ ಹೋಗಲು ರೈತರು ನಿರಾಕರಿಸುತ್ತಿದ್ದಾರೆ.
ದೆಹಲಿಗೆ ತೆರಳಲು ಅವಕಾಶ ಸಿಗದ ಹಿನ್ನೆಲೆ ರೈತರು ಶುಕ್ರವಾರ ಇಡೀ ರಾತ್ರಿ ಸಿಂಧೂ ಗಡಿಯಲ್ಲೇ ಕಳೆದಿದ್ದಾರೆ. ಹೀಗಾಗಿ ಸಿಂಗು ಗಡಿಯಲ್ಲಿ ರೈತರ ಆಂದೋಲನ ಮುಂದುವರಿಯಲಿದೆಯೇ ಅಥವಾ ಅವರು ಬುರಾರಿಗೆ ತೆರಳಲಿದ್ದಾರೆಯೇ ಎಂಬುದು ಇಂದು ಸರ್ಕಾರದ ಜೊತೆ ನಡೆಯುವ ಸಭೆಯ ನಂತರ ನಿರ್ಧರವಾಗಲಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.