ಕರ್ನಾಟಕ

karnataka

ETV Bharat / bharat

ಎನ್‌ಸಿಸಿಯ ತರಬೇತಿ ಆ್ಯಪ್​ಗೆ ರಾಜನಾಥ್​ ಸಿಂಗ್ ಚಾಲನೆ​

ರಾಷ್ಟ್ರೀಯ ಕೆಡೆಟ್​ ಕಾರ್ಪ್ಸ್ ನಿರ್ದೇಶನಾಲಯ (DGNCC) ಮೊಬೈಲ್​ ತರಬೇತಿ ಆ್ಯಪ್​ಗೆ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಚಾಲನೆ ನೀಡಿದ್ದಾರೆ.

App for online training of NCC cadets launched
ರಕ್ಷಣಾ ಸಚಿವ ರಾಜನಾಥ್​ ಸಿಂಗ್​

By

Published : Aug 27, 2020, 5:20 PM IST

Updated : Aug 27, 2020, 5:43 PM IST

ನವದೆಹಲಿ: ದೇಶದಲ್ಲಿನ ಎನ್​ಸಿಸಿ ಕೆಡೆಟ್​ಗಳಿಗೆ ಆನ್​ಲೈನ್​ ಮೂಲಕ ತರಬೇತಿ ನೀಡುವ ಮೊಬೈಲ್​ ಅಪ್ಲಿಕೇಶನ್​ವೊಂದಕ್ಕೆ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಗುರುವಾರ ಚಾಲನೆ ನೀಡಿರುವುದಾಗಿ ರಕ್ಷಣಾ ಸಚಿವಾಲಯ ತಿಳಿಸಿದೆ.

ಆ್ಯಪ್​ ಬಿಡುಗಡೆ ಬಳಿಕ ಮಾತನಾಡಿದ ರಕ್ಷಣಾ ಸಚಿವರು, ಕೋವಿಡ್​-19 ಹಿನ್ನೆಲೆ ಎನ್‌ಸಿಸಿ (ನ್ಯಾಷನಲ್ ಕೆಡೆಟ್ ಕಾರ್ಪ್ಸ್) ಕೆಡೆಟ್‌ಗಳ ತರಬೇತಿ ಮೇಲೆ ಭಾರಿ ಪರಿಣಾಮ ಬೀರಿದೆ. ಇನ್ನು ಕೆಲವು ದಿನಗಳ ಕಾಲ ಶಾಲಾ - ಕಾಲೇಜುಗಳು ತೆರೆಯುವ ಸಾಧ್ಯತೆ ಕಡಿಮೆ ಇದೆ.

ಇಂದು ಬಿಡುಗಡೆಯಾದ ಆ್ಯಪ್​ ಎನ್‌ಸಿಸಿ ಕೆಡೆಟ್‌ಗಳಿಗೆ ಆನ್​ಲೈನ್​ ತರಬೇತಿ ನೀಡಲು ಸಹಕಾರಿಯಾಗಲಿದೆ. ಹಾಗಾಗಿ ಎನ್‌ಸಿಸಿ ಕೆಡೆಟ್‌ಗಳು ಡಿಜಿಟಲ್ ಮಾಧ್ಯಮವನ್ನು ಬಳಸಿಕೊಳ್ಳಬೇಕು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ರಾಷ್ಟ್ರೀಯ ಕೆಡೆಟ್​ ಕಾರ್ಪ್ಸ್ ನಿರ್ದೇಶನಾಲಯ (DGNCC) ಎಂದು ಕರೆಯಲ್ಪಡುವ ಈ ಮೊಬೈಲ್ ಅಪ್ಲಿಕೇಶನ್​ ಆ್ಯಪ್​ನಲ್ಲಿ​​ ಎನ್‌ಸಿಸಿ ಕೆಡೆಟ್​ಗಳಿಗೆ ಸಹಾಯವಾಗುವ ಪಠ್ಯಕ್ರಮ, ತರಬೇತಿಯ ವಿಡಿಯೊಗಳು ಮತ್ತು ಪದೇ ಪದೆ ಕೇಳಲಾಗುವ ಪ್ರಶ್ನೆಗಳನ್ನು ಸೇರಿದಂತೆ ಎಲ್ಲ ತರಬೇತಿ ಸಾಮಗ್ರಿಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಗುರಿಯನ್ನು ಹೊಂದಿದೆ. ಪ್ರಶ್ನೆಗಳನ್ನು ಕೇಳುವ ಮೂಲಕ ಇದರಲ್ಲಿ ಸಂವಾದ ಮಾಡಬಹುದು. ಅರ್ಹ ಬೋಧಕ ಸಿಬ್ಬಂದಿ ನಿಮ್ಮ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ ಎಂದು ರಕ್ಷಣಾ ಸಚಿವರು ಹೇಳಿರುವುದಾಗಿ ಸಚಿವಾಲಯ ಮಹಿತಿ ನೀಡಿದೆ.

ರಕ್ಷಣಾ ಸಚಿವ ರಾಜನಾಥ್​ ಸಿಂಗ್​

ಆ್ಯಪ್ ಬಿಡುಗಡೆಯ ಸಮಯದಲ್ಲಿ ರಕ್ಷಣಾ ಸಚಿವರು ಎನ್‌ಸಿಸಿ ಕೆಡೆಟ್‌ಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಹನ ನಡೆಸಿ ಅವರ ಪ್ರಶ್ನೆಗಳಿಗೆ ಉತ್ತರಿಸಿದರು.

ರಕ್ಷಣಾ ಸಚಿವರೊಂದಿಗೆ ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್, ಮಹಾನಿರ್ದೇಶಕ ಎನ್‌ಸಿಸಿ ಲೆಫ್ಟಿನೆಂಟ್ ಜನರಲ್ ರಾಜೀವ್ ಚೋಪ್ರಾ ಮತ್ತು ಸಚಿವಾಲಯದ ಇತರ ಹಿರಿಯ ನಾಗರಿಕ ಮತ್ತು ಮಿಲಿಟರಿ ಅಧಿಕಾರಿಗಳು ಉಪಸ್ಥಿತರಿದ್ದರು.

Last Updated : Aug 27, 2020, 5:43 PM IST

ABOUT THE AUTHOR

...view details