ಮುಂಬೈ(ಮಹಾರಾಷ್ಟ್ರ):ಮಹಾರಾಷ್ಟ್ರ ರಾಜ್ಯವು ಕೊರೊನಾ ಆರ್ಭಟದಿಂದ ತತ್ತರಿಸಿದೆ. ಈ ರಾಜ್ಯವೊಂದರಲ್ಲೇ 50 ಸಾವಿರಕ್ಕೂ ಹೆಚ್ಚು ಜನರಿಗೆ ಮಹಾಮಾರಿ ವಕ್ಕರಿಸಿದ್ದರೆ, ನೂರಾರು ಜನರು ಬಲಿಯಾಗಿದ್ದಾರೆ.
ಹೆಣಗಳ ಮಧ್ಯೆ ರೋಗಿಗಳು... 'ಮಹಾ' ಆಸ್ಪತ್ರೆಯ ದುಸ್ಥಿತಿ ಅನಾವರಣ!
ಮಹಾರಾಷ್ಟ್ರ ಸರ್ಕಾರಿ ಆಸ್ಪತ್ರೆಗಳಲ್ಲಿ ಮೃತದೇಹಗಳ ಮಧ್ಯೆಯೇ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಆಸ್ಪತ್ರೆಗಳ ದುರವಸ್ಥೆ ಸಾಮಾಜಿಕ ಜಾಲತಾಣಗಳಲ್ಲಿ ಬಯಲಾಗಿದೆ.
ಹೆಣಗಳ ಮಧ್ಯೆ ರೋಗಿಗಳು
ಈ ಮಧ್ಯೆ ಅಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿನ ದುರವಸ್ಥೆ ಸಾಮಾಜಿಕ ಜಾಲತಾಣಗಳಲ್ಲಿ ಬಯಲಾಗಿದೆ. ಆಸ್ಪತ್ರೆಗಳಲ್ಲಿ ಹೆಣಗಳು ಬಿದ್ದಿದ್ದರೂ ಅವನ್ನು ಆಸ್ಪತ್ರೆಯಿಂದ ತೆರವುಗೊಳಿಸಿಲ್ಲ. ಆಸ್ಪತ್ರೆಗೆ ಬರುವ ಇತರೆ ರೋಗಿಗಳು ಹೆಣಗಳಿರುವ ಬೆಡ್ಗಳ ಪಕ್ಕದಲ್ಲೇ ದಾಖಲಾಗಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ಈ ಅಮಾನವೀಯತೆಯ ದೃಶ್ಯಗಳನ್ನು ಮಹಾರಾಷ್ಟ್ರದ ಬಿಜೆಪಿ ಮುಖಂಡ ರಾಮ್ ಕದಮ್ ಎಂಬುವರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಸರ್ಕಾರದ ಕಾರ್ಯವೈಖರಿಯನ್ನು ಅವರು ಪ್ರಶ್ನಿಸಿದ್ದಾರೆ.