ನವದೆಹಲಿ: ಸದಾ ಭಯೋತ್ಪಾದನೆ ನಿಗ್ರಹದ ಬಗ್ಗೆ ಮಾತನಾಡುವ ಮೋದಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಎರುತ್ತಿರೋದು ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ನಡುಕ ಉಂಟುಮಾಡಿದೆ.
ಮತ್ತೊಮ್ಮೆ ಅಧಿಕಾರಕ್ಕೆ ಮೋದಿ: ಭೂಗತ ಪಾತಕಿ ದಾವೂದ್ಗೆ ಶುರುವಾಯ್ತು ನಡುಕ
2019ರ ನಂತರ ಉತ್ತಮ ದಿನಗಳನ್ನ ಎದುರು ನೋಡುತ್ತಿದ್ದ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ನಡುಕ ಶುರುವಾಗಿದ್ದು ತನ್ನನ್ನ ರಕ್ಷಿಸುವಂತೆ ಪಾಕಿಸ್ತಾನದ ಮೊರೆ ಹೋಗಿದ್ದಾನೆ.
ಪಾಕಿಸ್ತಾನದಲ್ಲಿ ತಲೆ ಮರೆಸಿಕೊಂಡಿದ್ದಾನೆ ಎಂದು ಹೇಳಲಾಗುತ್ತಿರುವ ದಾವುದ್ ಸದ್ಯ ಲೋಕಸಭಾ ಚುನಾವಣೆ ಫಲಿತಾಂಶದಿಂದ ಕಂಗಾಲಾಗಿದ್ದಾನೆ ಎಂದು ಹೇಳಲಾಗುತ್ತಿದೆ. 2014 ರಲ್ಲಿ ಅಧಿಕಾರಕ್ಕೆರಿದ ಮೋದಿ ಸರ್ಕಾರ ದಾವೂದ್ ಮತ್ತು ಆತನ ಸಹಚರರ ವಿರುದ್ಧ ಕೈಗೊಂಡ ಕೆಲವು ನಿರ್ಧಾರಗಳಿಂದ ದಾವೂದ್ ಮತ್ತು ಆತನ ಸಹಚರರು ಅಡಗಿಕೊಂಡಿದ್ದರು. 2019ರ ನಂತರ ಒಳ್ಳೆ ಸಮಯಕ್ಕಾಗಿ ಎದುರು ನೋಡುತ್ತಿದ್ದ ದಾವೂದ್ಗೆ ನಿರಾಸೆಯಾಗಿದೆ.
ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿರೋದು ದಾವೂದ್ ನಿದ್ದೆಗೆಡಿಸಿದ್ದು, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐನ ಹಿರಿಯ ಅಧಿಕಾರಿಳಿಗೆ ಕರೆ ಮಾಡಿ ತನ್ನ ಅಳಲು ತೋಡಿಕೊಂಡಿದ್ದಾನೆ. ಭಾರತೀಯ ಗುಪ್ತಚರ ಸಂಸ್ಥೆಯಿಂದ ಕಾಪಾಡುವಂತೆ ಮನವಿ ಮಾಡಿದ್ದಾನೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ.