ಕರ್ನಾಟಕ

karnataka

ETV Bharat / bharat

ಗರ್ಭಿಣಿ ಪತ್ನಿಯನ್ನು ತವರು ಮನೆಯಿಂದ ಕರೆತರಲು ಹೋಗಿ ಕೊಲೆಯಾದ ಗಂಡ!

ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯನ್ನ ಕರೆದುಕೊಂಡು ಬರಲು ತೆರಳಿದ್ದ ಗಂಡನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.

ಗಂಡನ ಕೊಲೆ

By

Published : Jul 9, 2019, 9:13 PM IST

ಅಹಮದಾಬಾದ್​:ಪ್ರೀತಿಸಿ ಮದುವೆಯಾಗಿದ್ದ ಗರ್ಭಿಣಿ ಹೆಂಡತಿಯನ್ನು ತವರು ಮನೆಯಿಂದ ಕರೆದುಕೊಂಡು ಬರಲು ತೆರಳಿದ್ದ ವೇಳೆ ಗಂಡನ ಕೊಲೆ ಮಾಡಿರುವ ಘಟನೆ ಅಹಮದಾಬಾದ್​​ನ ಗಾಂಧಿಧಾಮ ಎಂಬಲ್ಲಿ ನಡೆದಿದೆ.

ಮೇಲ್ಜಾತಿಯ ಹುಡುಗಿ ಹಾಗೂ ಕೆಳಜಾತಿಯ 25 ವರ್ಷದ ಸೋಲಂಕಿ ಎಂಬ ಯುವಕ ಕಳೆದ ಕೆಲ ತಿಂಗಳ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇದೀಗ ಪತ್ನಿ ಎರಡು ತಿಂಗಳ ಗರ್ಭಿಣಿಯಾಗಿದ್ದು ತವರು ಮನೆಗೆ ಹೋಗಿ ಬರುವೆ ಎಂದು ಹೇಳಿ ತೆರಳಿದ್ದಳು. ಹಲವು ದಿನಗಳೇ ಕಳೆದರೂ ಆಕೆ ವಾಪಸ್​ ಬರದ ಕಾರಣ, ಖುದ್ದಾಗಿ ಆಕೆಯ ಗಂಡ ಕರೆದುಕೊಂಡು ಬರಲು ತೆರಳಿದ್ದಾನೆ. ಈ ವೇಳೆ ಆಕೆಯ ಪೋಷಕರು 10ದಿನ ಬಿಟ್ಟು ಕಳುಹಿಸುವುದಾಗಿ ಹೇಳಿದ್ದಾರೆ.

10 ದಿನ ಕಳೆದರೂ ಕಳುಹಿಸದ ಕಾರಣ ಆಕ್ರೋಶಗೊಂಡ ಈತ ಕೆಲ ಮಹಿಳಾ ಅಧಿಕಾರಿಗಳೊಂದಿಗೆ ಹೆಂಡತಿ ಮನೆಗೆ ತೆರಳಿದ್ದಾನೆ. ಈ ವೇಳೆ ಕೋಪಗೊಂಡ ಪತ್ನಿಯ ಸಂಬಂಧಿಕರು ಈತನ ಕೊಲೆ ಮಾಡಿದ್ದಾರೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ. ಮಹಿಳಾ ಅಧಿಕಾರಿಗಳು ತೆರಳಿದ್ದ ವಾಹನ ಸಹ ಘಟನೆಯಲ್ಲಿ ಜಖಂಗೊಂಡಿದೆ ಎಂದು ತಿಳಿದು ಬಂದಿದೆ.

ಘಟನೆಗೆ ಸಂಬಂಧಿದಂತೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details