ಕರ್ನಾಟಕ

karnataka

ETV Bharat / bharat

40 ಟಿಎಂಸಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಿ; ರಾಜ್ಯಕ್ಕೆ ಆದೇಶಿಸಿದ CWMA - ಕಾವೇರಿ ನದಿ ನೀರು

ಕರ್ನಾಟಕದ ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟಿನಲ್ಲಿ ಚೆಕ್ ಡ್ಯಾಂ ನಿರ್ಮಿಸುವ ಕರ್ನಾಟಕ ಸರ್ಕಾರದ ಕ್ರಮಕ್ಕೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿತ್ತು. ಈಗ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು(ಸಿಡಬ್ಲ್ಯುಎಂಎ) ತಮಿಳುನಾಡಿಗೆ 40 ಟಿಎಂಸಿ ನೀರು ಬಿಡುವಂತೆ ಆದೇಶ ಹೊರಡಿಸಿದೆ.

CWMA
ಕಾವೇರಿ ನದಿ

By

Published : Jun 11, 2020, 12:13 PM IST

Updated : Jun 11, 2020, 2:18 PM IST

ನವದೆಹಲಿ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ 6ನೇ ಸಭೆ ಬುಧವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದಿದೆ. ಸಿಡಬ್ಲ್ಯುಎಂಎ ಕರ್ನಾಟಕ ಸರ್ಕಾರಕ್ಕೆ 40 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುವಂತೆ ಆದೇಶಿಸಿದೆ.

ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಸಿಡಬ್ಲುಎಂಎ ರಚನೆಯಾದ ನಂತರ ಆರನೇ ಸಭೆಯ ಅಧ್ಯಕ್ಷತೆಯನ್ನು ಸಿಡಬ್ಲುಎಂಎ ರಾಜೇಂದ್ರ ಕುಮಾರ್ ಜೈನ್ ವಹಿಸಿದ್ದರು. ಸಭೆಯಲ್ಲಿ ತಮಿಳುನಾಡು ಸರ್ಕಾರದ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕೆ. ಮಣಿವಾಸಗನ್ ಮತ್ತು ಕರ್ನಾಟಕ, ಕೇರಳ ಮತ್ತು ಪುದುಚೇರಿಯ ಇತರೆ ಕಾರ್ಯದರ್ಶಿಗಳು ಭಾಗವಹಿಸಿದ್ದರು.

ಈ ಸಂದರ್ಭ ಕರ್ನಾಟಕದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟಿನಲ್ಲಿನಲ್ಲಿ ಚೆಕ್ ಡ್ಯಾಂ ನಿರ್ಮಿಸುವ ಕರ್ನಾಟಕ ಸರ್ಕಾರದ ಕ್ರಮವನ್ನು ತಮಿಳುನಾಡು ಆಕ್ಷೇಪಿಸಿತು. ಹೆಚ್ಚುವರಿ ಮಳೆಯ ಸಮಯದಲ್ಲಿ ಅವರಿಗೆ ಮಳೆ ನೀರನ್ನು ಹಿಡಿದಿಡಲು ಯಾವುದೇ ಸ್ಟೊರೇಜ್​ ವ್ಯವಸ್ಥೆ ಇಲ್ಲವೆಂದು ಕರ್ನಾಟಕ ವಾದಿಸಿತ್ತು. ತಮಿಳುನಾಡು ಮತ್ತು ಪುದುಚೇರಿ ಈ ಯೋಜನೆಯನ್ನು ಆಕ್ಷೇಪಿಸುತ್ತಲೇ ಇದ್ದ ಕಾರಣ, ಸಭೆಯಲ್ಲಿ ಸ್ವಲ್ಪ ಗೊಂದಲ ಉಂಟಾಯಿತು.

ಅಂತಿಮವಾಗಿ, ಕಾವೇರಿ ವಾಟರ್ ಮ್ಯಾನೇಜ್‌ಮೆಂಟ್ ಪ್ರಾಧಿಕಾರ ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ತಮಿಳುನಾಡಿಗೆ 40 ಟಿಎಂಸಿ ನೀರನ್ನು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಆದೇಶಿಸಿತು. ಸಿಡಬ್ಲುಎಂಎ ನಿರ್ದೇಶನದಂತೆ ತಮಿಳುನಾಡಿಗೆ ಜೂನ್‌ನಲ್ಲಿ 9.19 ಟಿಎಂಸಿಎಫ್ ನೀರು ಮತ್ತು ಜುಲೈನಲ್ಲಿ 31.24 ಟಿಎಂಸಿಎಫ್ ನೀರು ಸಿಗಲಿದೆ.

ಸುಪ್ರೀಂ ಕೋರ್ಟ್‌ನ ಆದೇಶಕ್ಕೆ ಒಪ್ಪಿಕೊಂಡ ಸಿಡಬ್ಲುಎಂಎ, ಕರ್ನಾಟಕವು 40 ಟಿಎಂಸಿ ನೀರನ್ನು ಮತ್ತು ತಮಿಳುನಾಡಿಗೆ ಅಂತಾರಾಜ್ಯ ಗಡಿಯಾಗಿರುವ ಬಿಲಿಗುಂಡುಲುಗೆ ಬಿಡುಗಡೆ ಮಾಡಬೇಕೆಂದು ಒಪ್ಪಿಕೊಂಡಿತು. ಈ ಆದೇಶಕ್ಕೆ ಎಲ್ಲಾ ರಾಜ್ಯಗಳು ಒಪ್ಪಿಕೊಂಡಿದ್ದರಿಂದ ಜೂನ್ 12 ರಂದು ಮೆಟ್ಟೂರು ಅಣೆಕಟ್ಟನ್ನು ತೆರೆಯುವುದಾಗಿ ತಮಿಳುನಾಡು ಸರ್ಕಾರ ಒಪ್ಪಿಕೊಂಡಿದೆ ಎಂದು ಸಿಡಬ್ಲುಎಂಎ ಅಧ್ಯಕ್ಷ ಆರ್.ಕೆ. ಜೈನ್ ಮಾಧ್ಯಮಗಳಿಗೆ ತಿಳಿಸಿದರು.

Last Updated : Jun 11, 2020, 2:18 PM IST

ABOUT THE AUTHOR

...view details