ಕರ್ನಾಟಕ

karnataka

ETV Bharat / bharat

ರಾಮನ ಪೋಸ್ಟರ್​​ ಅಂಟಿಸಿದ ಬಳಿಕ ಭುಗಿಲೆದ್ದ ಹಿಂಸಾಚಾರ!

ರಾಮ ಜನ್ಮಭೂಮಿ ಶೀಲಾನ್ಯಾಸ ಕಾರ್ಯಕ್ರಮದ ಬಗ್ಗೆ ಪೋಸ್ಟರ್​ ಅಂಟಿಸಿದ ಬಳಿಕ ಹಿಂಸಾಚಾರ ಭುಗಿಲೆದ್ದು ಪೊಲೀಸರು ಸೇರಿದಂತೆ ಆರು ಜನ ಗಾಯಗೊಂಡಿರುವ ಘಟನೆ ಅಸ್ಸೋಂನ ಬರಾಕ್​ ಕಣಿವೆಯಲ್ಲಿ ನಡೆದಿದೆ.

curfew imposed in parts of barak, Barak curfew imposed, Barak curfew imposed news, Clash in Barak, Barak clash news, ಬರಾಕ್​ ಕಣಿವೆಯಲ್ಲಿ ಕರ್ಫ್ಯೂ ಜಾರಿ, ಬರಾಕ್​ನಲ್ಲಿ ಕರ್ಫ್ಯೂ ಜಾರಿ, ಬರಾಕ್​ನಲ್ಲಿ ಕರ್ಫ್ಯೂ ಜಾರಿ ಸುದ್ದಿ, ಬರಾಕ್​ನಲ್ಲಿ ಘರ್ಷಣೆ, ಬರಾಕ್​ ಘರ್ಷಣೆ ಸುದ್ದಿ,
ರಾಮನ ಪೋಸ್ಟರ್​​ ಅಂಟಿಸಿದ ಬಳಿಕ ಭುಗಿಲೆದ್ದ ಹಿಂಸಾಚಾರ

By

Published : Aug 3, 2020, 7:40 AM IST

Updated : Aug 3, 2020, 8:21 AM IST

ಸಿಲ್ಚಾರ್: ಅಸ್ಸೋಂನ ಬರಾಕ್ ಕಣಿವೆಯ ಸಿಲ್ಚಾರ್ ಪಟ್ಟಣದ ಬಳಿಯ ಸಲೂಗ್ರಾಮ್ ಪೊಲೀಸ್ ಹೊರ ಠಾಣೆ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ.

ಸಿಲ್ಚಾರ್​ ಪಟ್ಟಣದ ಕೆಲವು ಪ್ರದೇಶಗಳಲ್ಲಿ ಘರ್ಷಣೆ ಸಂಭವಿಸಿದ್ದು, ಪರಿಣಾಮ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಘರ್ಷಣೆ ಹಿನ್ನೆಲೆ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ.

ರಾಮನ ಪೋಸ್ಟರ್​​ ಅಂಟಿಸಿದ ಬಳಿಕ ಭುಗಿಲೆದ್ದ ಹಿಂಸಾಚಾರ

ಆಗಸ್ಟ್ 5 ರಂದು ನಿಗದಿತ ರಾಮ ಜನ್ಮಭೂಮಿ ಶೀಲಾನ್ಯಾಸ ಕಾರ್ಯಕ್ರಮದ ಬಗ್ಗೆ ಪೋಸ್ಟರಿಂಗ್ ಮಾಡುತ್ತಿದ್ದಾಗ ಯುವಕರ ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ. ಹಿಂಸಾಚಾರ ಭುಗಿಲೇಳುತ್ತಿದ್ದಂತೆ ಪೊಲೀಸರು ತಕ್ಷಣ ಸ್ಥಳಕ್ಕಾಗಮಿಸಿ ಗುಂಪು ಚದುರಿಸಲು ಲಾಠಿ ಚಾರ್ಜ್​ ಮಾಡಿದ್ದಾರೆ. ಆದರೆ, ಅದಕ್ಕೂ ಬಗ್ಗದಿದ್ದಾಗ ರಬ್ಬರ್​ ಗುಂಡುಗಳನ್ನ ಪೊಲೀಸರು ಹಾರಿಸಿದ್ದಾರೆ.

ಹಲವು ಗಂಟೆಗಳ ಕಾಲ ನಡೆದ ಘರ್ಷಣೆಯಲ್ಲಿ ಕನಿಷ್ಠ ಆರು ನಾಗರಿಕರು ಮತ್ತು ಸೋನ್ ಪೊಲೀಸರು ಗಾಯಗೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಘರ್ಷಣೆಗೆ ಸಂಪೂರ್ಣ ಕಾರಣ ತಿಳಿದು ಬಂದಿಲ್ಲ.

Last Updated : Aug 3, 2020, 8:21 AM IST

ABOUT THE AUTHOR

...view details