ಕರ್ನಾಟಕ

karnataka

ETV Bharat / bharat

ಪ್ರವಾಹದಲ್ಲಿ ಸಿಲುಕಿದ್ದ ಸೈನಿಕನ ಪಾರ್ಥಿವ ಶರೀರ: ಮೃತದೇಹ ಹೊತ್ತು ತಂದ ಸಿಆರ್‌ಪಿಎಫ್ ಸಿಬ್ಬಂದಿ

ಶನಿವಾರ ಮೃತಪಟ್ಟಿದ್ದ ಡಿಆರ್‌ಜಿ ಜವಾನ್​​ ಅವರ ಮೃತದೇಹವನ್ನು ತರುವಾಗ ನದಿಯ ಪ್ರವಾಹದಲ್ಲಿ ವಾಹನ ಸಿಲುಕಿಕೊಂಡಿದೆ. ಆಗ ಸಿಆರ್​ಪಿಎಫ್ ಸಿಬ್ಬಂದಿ ಪಾರ್ಥಿವ ಶರೀರವನ್ನು ಮನೆಗೆ ತರಲು ಸಹಾಯ ಮಾಡಿದ್ದಾರೆ.

ಸಿಆರ್‌ಪಿಎಫ್ ಸಿಬ್ಬಂದಿಯ ಸಹಾಯಹಸ್ತ
ಸಿಆರ್‌ಪಿಎಫ್ ಸಿಬ್ಬಂದಿಯ ಸಹಾಯಹಸ್ತ

By

Published : Aug 17, 2020, 4:55 PM IST

Updated : Aug 17, 2020, 5:17 PM IST

ಸುಕ್ಮಾ (ಛತ್ತೀಸ್​ಗಡ): ಮೃತಪಟ್ಟಿದ್ದ ಜವಾನ್ (ಡಿಆರ್‌ಜಿ) ಅವರ ಪಾರ್ಥಿವ ಶರೀರವನ್ನು ತರುತ್ತಿರುವ ವೇಳೆ ಪ್ರವಾಹದಿಂದ ರಸ್ತೆಯ ಮೇಲೆ ನೀರು ಹರಿಯುತ್ತಿತ್ತು. ವಾಹನ ಆ ನೀರಿನಲ್ಲಿ ಚಲಿಸುವುದು ಅಸಾಧ್ಯವಾಗಿತ್ತು. ಈ ಸಮಯದಲ್ಲಿ ಮಾನವೀಯತೆ ಮೆರೆದಿರುವ ಸಿಆರ್‌ಪಿಎಫ್ ಸಿಬ್ಬಂದಿ ಮತ್ತು ಜಿಲ್ಲಾ ರಿಸರ್ವ್ ಗಾರ್ಡ್ ಸಿಬ್ಬಂದಿ ಮೃತದೇಹವನ್ನು ಹೊತ್ತು ನದಿಯಲ್ಲಿ ಕಾಲ್ನಡಿಗೆಯಲ್ಲೇ ಸಾಗಿದ್ದಾರೆ.

ಡಿಆರ್​​ಜಿ ಜವಾನ್ ಅವರು ಚಿಕಿತ್ಸೆಗಾಗಿ ಸುಕ್ಮಾ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಶನಿವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಈ ಘಟನೆಗೂ ಎರಡು ಗಂಟೆ ಮೊದಲೇ ಸಿಆರ್​ಪಿಎಫ್​ ಸಿಬ್ಬಂದಿ ಭೆಜಿ ಗ್ರಾಮದ ನಿವಾಸಿಯ ಮೃತದೇಹವನ್ನೂ ಸಾಗಿಸಿದ್ದರು.

ಪ್ರವಾಹದಲ್ಲಿ ಸಿಲುಕಿದ್ದ ಸೈನಿಕನ ಪಾರ್ಥಿವ ಶರೀರ

ಸಿಆರ್​ಪಿಎಫ್ 219ನೇ ಬೆಟಾಲಿಯನ್‌ನ ಎರಡನೇ ಕಮಾಂಡೆಂಟ್ ಮೋಹನ್ ಬಿಶ್ತ್ ಈ ಕಾರ್ಯದಲ್ಲಿ ಭಾಗಿಯಾಗಿದ್ದರು. ಸರಿಯಾದ ಸಮಯಕ್ಕೆ ಸಿಆರ್‌ಪಿಎಫ್ ಸಿಬ್ಬಂದಿ ನಮಗೆ ಸಹಾಯ ಮಾಡಿದ್ದರಿಂದ ಪಾರ್ಥಿವ ಶರೀಸ ಮನೆಗೆ ತಲುಪಲು ಸಾಧ್ಯವಾಯಿತು ಎಂದು ಮೃತರ ಕುಟುಂಬದವರು ಹೇಳಿದ್ದಾರೆ.

ಮತ್ತೊಂದೆಡೆ ಛತ್ತೀಸ್‌ಗಡದ ಕೆಲವು ಭಾಗಗಳಲ್ಲಿ, ವಿಶೇಷವಾಗಿ ಬಸ್ತಾರ್ ವಿಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಪ್ರವಾಹದಂತಹ ಸಂದರ್ಭಗಳನ್ನು ಎದುರಿಸಲು ಜಾಗರೂಕರಾಗಿರಲು ರಾಜ್ಯ ಸರ್ಕಾರ ಜಿಲ್ಲಾ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿದೆ.

Last Updated : Aug 17, 2020, 5:17 PM IST

ABOUT THE AUTHOR

...view details