ಕರ್ನಾಟಕ

karnataka

ETV Bharat / bharat

ಮಹಾರಾಷ್ಟ್ರ ಚುನಾವಣೆಯಲ್ಲಿ ಕಾಂಗ್ರೆಸ್​​ಗೆ ಆಘಾತ: ಪ್ರಚಾರದಿಂದ ಹಿಂದೆ ಸರಿದ ರಾಜ್ಯಾಧ್ಯಕ್ಷ - ಕಾಂಗ್ರೆಸ್ ರಾಜ್ಯಾಧ್ಯಕ್ಷ

ಪಕ್ಷ ತನ್ನನ್ನ ಮೂಲೆ ಗುಂಪು ಮಾಡುತ್ತಿದೆ ಎಂದು ಅಸಮಾಧಾನಗೊಂಡ ಮಹಾರಾಷ್ಟ್ರ ಕಾಂಗ್ರೆಸ್​ ರಾಜ್ಯಾಧ್ಯಕ್ಷ ಸಂಜಯ್ ನಿರುಪಮ್ ಚುನಾವಣಾ ಪ್ರಚಾರ ಕಣದಿಂದ ಹಿಂದೆ ಸರಿದಿದ್ದಾರೆ.

ಸಂಜಯ್ ನಿರುಪಮ್

By

Published : Oct 4, 2019, 3:38 PM IST

ಮುಂಬೈ:ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗು ಪಡೆಯುತಿದ್ದು, ಒಬ್ಬೊಬ್ಬರಾಗಿ ನಾಮಪತ್ರ ಸಲ್ಲಿಸುತ್ತಿದ್ದಾರೆ. ಹೀಗಿರುವಾಗಲೇ ಕಾಂಗ್ರೆಸ್ ರಾಜ್ಯಾಧ್ಯಕ್ಷ ಪಕ್ಷಕ್ಕೆ ಆಘಾತ ಕೊಟ್ಟಿದ್ದಾರೆ.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸಂಜಯ್ ನಿರುಪಮ್ ರಾಜ್ಯಾಧ್ಯಕ್ಷ ಸ್ಥಾನದಿಂದ ಹಿಂದೆ ಸರಿದಿದ್ದು, ಚುನಾವಣಾ ಪ್ರಚಾರದಿಂದ ದೂರ ಉಳಿಯುವುದಾಗಿ ತಿಳಿಸಿದ್ದಾರೆ.

ಸಂಜಯ್ ನಿರುಪಮ್ ಮಾತನಾಡಿ, ಪಕ್ಷದಲ್ಲಿ ನನ್ನ ಮೂಲೆಗುಂಪು ಮಾಡಲಾಗುತ್ತಿದೆ. ಈ ಬೆಳವಣಿಗೆ ಹೀಗೆಯೇ ಮುಂದುವರಿದರೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಹಿಂದೆ ಸರಿಯಲು ಕೂಡ ಯೋಚಿಸುವುದಿಲ್ಲ. ಸದ್ಯ ಚುನಾವಣಾ ಪ್ರಚಾರ ಕಣದಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ರು.

ಸಂಜಯ್ ನಿರುಪಮ್ ಸರಣಿ ಟ್ವೀಟ್​ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದು, ನಾನು ಮುಂಬೈನಲ್ಲಿ ಒಬ್ಬ ಅಭ್ಯರ್ಥಿಗೆ ಟಿಕೆಟ್​ ನೀಡುವಂತೆ ಪಕ್ಷವನ್ನ ಕೇಳಿಕೊಂಡಿದ್ದೆ. ಆದ್ರೆ, ನನ್ನ ಮನವಿಯನ್ನ ತಿರಸ್ಕರಿಸಲಾಗಿದೆ ಎಂದು ಟ್ವೀಟ್​ ಮಾಡಿದ್ದಾರೆ.

ABOUT THE AUTHOR

...view details