ಕರ್ನಾಟಕ

karnataka

ETV Bharat / bharat

'ಕೋವಿಡ್​ ಸಂಕಷ್ಟದಲ್ಲಿ ಕಾರ್ಪೊರೇಟ್​ ಸಾಲ ರೈಟ್​ ಆಫ್​ ದುರದೃಷ್ಟಕರ' - ಮೆಹುಲ್ ಚೋಕ್ಸಿ

ಕೊರೊನಾ ವೈರಸ್​ ಲಾಕ್​ಡೌನ್​ನಿಂದಾಗಿ ದೇಶದ ಲಕ್ಷಾಂತರ ಜನ ಜೀವನೋಪಾಯ ಕಳೆದುಕೊಂಡಿದ್ದಾರೆ. ಇಂಥ ಸಮಯದಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ಉದ್ದೇಶಪೂರ್ವಕ ಸಾಲ ಬಾಕಿದಾರರ ಸಾಲಗಳನ್ನು ರೈಟ್​ ಆಫ್​ ಮಾಡಿದೆ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ವಾಗ್ದಾಳಿ ನಡೆಸಿದ್ದಾರೆ.

CPI says timing of loan waivers for corporates "distressing"
CPI says timing of loan waivers for corporates "distressing"

By

Published : Apr 30, 2020, 7:48 PM IST

ನವದೆಹಲಿ:ಕೋವಿಡ್​ ಬಿಕ್ಕಟ್ಟಿನಿಂದ ಇಡೀ ದೇಶದ ಜನತೆ ಸಂಕಷ್ಟದಲ್ಲಿರುವಾಗ ಕಾರ್ಪೊರೇಟ್​ ಸಂಸ್ಥೆಗಳ ಸಾಲಗಳನ್ನು ಕೇಂದ್ರ ಸರ್ಕಾರ ರೈಟ್​ ಆಫ್​ ಮಾಡಿದ್ದು ದುರದೃಷ್ಟಕರ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಹೇಳಿದ್ದಾರೆ.

"ಆರ್​ಬಿಐಗೆ ಸಲ್ಲಿಸಲಾಗಿದ್ದ ಆರ್​ಟಿಐ ಅರ್ಜಿಗೆ ಬಂದ ಉತ್ತರದ ಪ್ರಕಾರ, ಸೆಪ್ಟೆಂಬರ್ 30, 2019 ರಲ್ಲಿದ್ದಂತೆ 50 ಸಾಲ ಬಾಕಿದಾರರ 68,607 ಕೋಟಿ ರೂ. ಮೊತ್ತವನ್ನು ರೈಟ್ ಆಫ್ ಮಾಡಲಾಗಿದೆ. ಹೀಗೆ ಬ್ಯಾಂಕುಗಳು ರೈಟ್​ ಆಫ್​ ಮಾಡುವುದು ಆಗಾಗ ನಡೆಯುವ ಪ್ರಕ್ರಿಯೆಯೇ ಆಗಿದ್ದರೂ, ಇದನ್ನು ಮಾಡಿದ ಸಮಯ ಸೂಕ್ತವಾಗಿಲ್ಲ. ಕೊರೊನಾ ವೈರಸ್​ ಲಾಕ್​ಡೌನ್​ನಿಂದಾಗಿ ದೇಶದ ಲಕ್ಷಾಂತರ ಜನ ಜೀವನೋಪಾಯ ಕಳೆದುಕೊಂಡಿದ್ದಾರೆ. ಇಂಥ ಸಮಯದಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ಉದ್ದೇಶಪೂರ್ವಕ ಸಾಲ ಬಾಕಿದಾರರ ಸಾಲಗಳನ್ನು ರೈಟ್​ ಆಫ್​ ಮಾಡಿದೆ" ಎಂದು ಡಿ. ರಾಜಾ ವಾಗ್ದಾಳಿ ನಡೆಸಿದ್ದಾರೆ.

ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದ್ದ ಅನುತ್ಪಾದಕ ಸಾಲಗಳ ಕುರಿತು ಸಿಪಿಐ ಕಾಲಕಾಲಕ್ಕೆ ಸರ್ಕಾರವನ್ನು ಎಚ್ಚರಿಸುತ್ತ ಬಂದಿದೆ. ಈ ಸಾಲಗಳ ಮರುಪಾವತಿಗೆ ಸೂಕ್ತ ಕ್ರಮಗಳಿಗಾಗಿ ನಾವು ಆಗ್ರಹಿಸುತ್ತಲೇ ಇದ್ದೇವೆ. 2004 ರಲ್ಲಿ ಯುಪಿಎ-1 ರ ಅವಧಿಯಲ್ಲಿ ಅನುತ್ಪಾದಕ ಸಾಲಗಳ ಪ್ರಮಾಣ 51,500 ಕೋಟಿ ರೂ. ಇತ್ತು. 2009 ರಲ್ಲಿ ಯುಪಿಎ-2 ಅವಧಿಯಲ್ಲಿ ಇದರ ಪ್ರಮಾಣ 45,000 ಕೋಟಿ ರೂ. ಗಳಾಗಿತ್ತು. 2014 ರಲ್ಲಿ ಎನ್​ಡಿಎ-1 ಅವಧಿಯಲ್ಲಿ ಇದು 2,16,000 ಕೋಟಿ ರೂ. ಹಾಗೂ 2019 ರಲ್ಲಿ ಎನ್​ಡಿಎ-2 ಅವಧಿಯಲ್ಲಿ 7,40,000 ಕೋಟಿ ರೂ.ಗಳಿಗೆ ಏರಿಕೆಯಾಯಿತು ಎಂದು ರಾಜಾ ಮಾಹಿತಿ ನೀಡಿದರು.

ತಲೆಮರೆಸಿಕೊಂಡ ಆರ್ಥಿಕ ಅಪರಾಧಿಗಳಾದ ವಿಜಯ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ, ವಿಕ್ರಂ ಕೋಠಾರಿ ಮತ್ತು ಇನ್ನೂ ಹಲವರು ಬ್ಯಾಂಕ್​, ಆರ್​ಬಿಐ ಹಾಗೂ ಸರ್ಕಾರದ ಕುಮ್ಮಕ್ಕಿನಿಂದಲೇ ಲಾಭ ಪಡೆದುಕೊಂಡಿದ್ದಾರೆ. ಇಂಥವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಡಿ. ರಾಜಾ ಒತ್ತಾಯಿಸಿದರು.

ABOUT THE AUTHOR

...view details