ಆಂಧ್ರಪ್ರದೇಶ:ಅನಂತಪುರ ಜಿಲ್ಲೆಯ ತಾಡಿಮರಿ ಗ್ರಾಮದಲ್ಲಿ ಹಸುವೊಂದು ಕಳೆದ 8 ವರ್ಷಗಳಿಂದ ದಿನಕ್ಕೆ ಎರಡು ಬಾರಿ 10 ಲೀಟರ್ ಹಾಲು ನೀಡುವ ಮೂಲಕ ಗಮನ ಸೆಳೆದಿದೆ.
8 ವರ್ಷಗಳಿಂದ ದಿನಕ್ಕೆ ಎರಡು ಬಾರಿ 10 ಲೀಟರ್ ಹಾಲು ಕೊಡುತ್ತಿದೆ ಈ ಹಸು!
ಹಸುವೊಂದು ದಿನಕ್ಕೆ ಎರಡು ಬಾರಿ 10 ಲೀಟರ್ ಹಾಲು ನೀಡುವ ಮೂಲಕ ರೈತನೊಬ್ಬನ ಆದಾಯವನ್ನು ದ್ವಿಗುಣ ಮಾಡಿದೆ. ಈ ಹಸುವನ್ನು ಕರ್ನಾಟಕದಿಂದ ಖರೀದಿ ಮಾಡಲಾಗಿದೆ.
ವೀರನಾರಪ್ಪ ಎಂಬ ರೈತನಿಗೆ ಸೇರಿದ ಈ ಹಸು ಕಳೆದ 8 ವರ್ಷದಿಂದ ದಿನಕ್ಕೆ ಎರಡು ಬಾರಿ 10 ಲೀಟರ್ ಹಾಲು ನೀಡುತ್ತಿದೆ. ಸುದ್ದಿ ತಿಳಿದು ಸ್ಥಳೀಯರು ಹಸು ನೋಡಲು ಬರುತ್ತಿದ್ದಾರೆ. ವೀರನಾರಪ್ಪ 2011ರಲ್ಲಿ ಕರ್ನಾಟಕದಿಂದ 40,000 ರೂ. ಕೊಟ್ಟು ಈ ಹಸುವನ್ನು ಖರೀದಿಸಿದ್ದರು. ಅವರ ಮನೆಗೆ ಬಂದ ಬಳಿಕ ಈ ಹಸು ದಿನಕ್ಕೆ 20 ಲೀಟರ್ ಹಾಲು ನೀಡಲು ಪ್ರಾರಂಭಿಸಿದೆ.
ಇದನ್ನೇ ದೊಡ್ಡ ಸಂಪಾದನೆಯನ್ನಾಗಿ ಮಾಡಿಕೊಂಡಿರುವ ರೈತ ವೀರನಾರಪ್ಪ, ತಮ್ಮ ಆದಾಯ ಹೆಚ್ಚಿಕೊಂಡಿದ್ದಾರೆ. ಆಕ್ಸಿಟೋಸಿನ್ ಹಾರ್ಮೋನ್ ಹೆಚ್ಚಿನ ಪ್ರಮಾಣದಲ್ಲಿದ್ದರೆ ಹಸುಗಳು ವರ್ಷಗಳ ಕಾಲ ಹಾಲು ನೀಡುತ್ತವೆ ಎಂದು ಪಶುವೈದ್ಯಕೀಯ ವಿಭಾಗದ ಎಡಿ ಶ್ರೀನಿವಾಸುಲು ಈ ಬಗ್ಗೆ ಮಾಹಿತಿ ನೀಡಿದ್ದಾರೆ.