ನವದೆಹಲಿ : ಇತ್ತೀಚೆಗೆ ಕೆಲವರಲ್ಲಿ ಪತ್ತೆಯಾಗಿರುವ ಈ 'ಮುಕೊರ್ಮೈಕೋಸಿಸ್ ಕಾಯಿಲೆ' ಬಲು ಅಪರೂಪ. ಆದರೆ ಅದು ಹೊಸದಲ್ಲ. ಈ ರೋಗ ಕೋವಿಡ್ನಿಂದ ಬಂದಿದೆ ಎಂಬ ವಿಷಯ ಹೊಸದಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಈ ಕುರಿತು ದೆಹಲಿಯ ಮ್ಯಾಕ್ಸ್ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೋವಿಡ್ ಸಾಂಕ್ರಾಮಿಕದ ಮಧ್ಯೆ 24 ಪ್ರಕರಣಗಳು ವರದಿಯಾಗಿವೆ.
ಮುಕೊಮೈರ್ಕೋಸಿಸ್ ನಿಂದ ಬಳಲುತ್ತಿರುವ 24 ರೋಗಿಗಳು ಕೋವಿಡ್ ಸೋಂಕಿತರಾಗಿದ್ದು, ಅದರಲ್ಲಿ ಈಗಾಗಲೇ 20 ಜನರು ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ ಎಂದು ಆಸ್ಪತ್ರೆಯ ಇಎನ್‌ಟಿ ಪ್ರಧಾನ ನಿರ್ದೇಶಕ ಸಂಜಯ್ ಸಚ್‌ದೇವ ಹೇಳಿದರು. ಅಲ್ಲದೆ ಒಬ್ಬರು ಸಾವಿಗೀಡಾಗಿದ್ದು ಮೂವರು ಯಾವುದೇ ಶಸ್ತ್ರಚಕಿತ್ಸೆಗೆ ಒಳಪಡದೆ ಗುಣಮುಖರಾಗಿದ್ದಾರೆ ಎಂದು ತಿಳಿಸಿದರು.
ಈ ರೋಗವು ಹೆಚ್ಚಾಗಿ ಕೋವಿಡ್ ಸೋಂಕಿತರಲ್ಲಿ ಕಂಡು ಬರುತ್ತಿದೆ. ಈ ರೋಗ ಕಂಡು ಬಂದ ಎರಡು ದಿನಗಳಲ್ಲಿ ರೋಗಿಯು ಕಣ್ಣು, ಮೂಗು ಮತ್ತು ದೇಹದ ಇತರ ಭಾಗಗಳನ್ನು ಕಳೆದುಕೊಳ್ಳಲು ಪ್ರಾರಂಭಿಸಿದರು ಎಂದು ಸಹದೇವ ತಿಳಿಸಿದರು.