ಹೈದರಾಬಾದ್:ಕೊರೊನೊ ವೈರಸ್ ಪ್ರಪಂಚದ ಮೂಲೆ - ಮೂಲೆಗಳನ್ನು ವ್ಯಾಪಿಸುತ್ತಿದ್ದಂತೆ, ಎಲ್ಲೆಡೆ ಲಾಕ್ಡೌನ್ ಘೋಷಣೆಯಾಗುತ್ತಿದ್ದಂತೆ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳು ಇದ್ದಕ್ಕಿದ್ದಂತೆ ಇಳಿಕೆ ಕಂಡಿವೆ. ಆದರೆ ಆತಂಕಕಾರಿ ಬೆಳವಣಿಗೆಯೇನೆಂದರೆ ಕೌಟುಂಬಿಕ ಹಿಂಸೆ ಮತ್ತು ಆನ್ ಲೈನ್ ವಂಚನೆಗಳಂತಹ ಅಪರಾಧಗಳು ವ್ಯಾಪಕಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ಲಾಕ್ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಇರಬೇಕಾಗಿರುವುದರಂದ ಇದರ ಸೈಡೆಫೆಕ್ಟ್ ರೂಪದಲ್ಲಿ ಕೌಟುಂಬಿಕ ಹಿಂಸೆಗಳಿಗೆ ಹೆಚ್ಚಿನ ಅವಕಾಶ ಒದಗಿದಂತಾಗಿದೆ.
2016ರಲ್ಲಿ ಶೇ.40ರಷ್ಟು ಶಿಶು ಲೈಂಗಿಕ ಹಲ್ಲೆಗಳು ಮನೆಗಳಲ್ಲಿ ಸಂಭವಿಸಿದ್ದವಲ್ಲದೇ ಮಕ್ಕಳ ಮೇಲಿನ ದೈಹಿಕ ದೌರ್ಜನ್ಯಗಳು ತಂದೆ ತಾಯಿಗಳಿಂದಲೇ ನಡೆದ ವರದಿಯಾಗಿದ್ದವು.
ಕೌಟುಂಬಿಕ ಹಿಂಸೆಯನ್ನು ಅನುಭವಿಸಬೇಕಾದ ಮಹಿಳೆಯರು ಮತ್ತು ಮಕ್ಕಳು ಕ್ವಾರಂಟೀನ್ ಅವಧಿಯಲ್ಲಿ ತಮ್ಮ ಮೇಲೆ ದೌರ್ಜನ್ಯ ನಡೆಸುವವರಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಬ್ರೆಜಿಲ್ ನಿಂದ ಜರ್ಮನಿ ವರೆಗೆ, ಇಟಲಿಯಿಂದ ಚೀನಾದವರೆಗೆ, ಉಪಖಂಡಗಳವರೆಗೆ ಸಾಮಾಜಿಕ ಕಾರ್ಯಕರ್ತರು ಮತ್ತು ಹಲ್ಲೆಗೊಳಗಾದವರು ನೀಡಿರುವ ಮಾಹಿತಿಗಳ ಪ್ರಕಾರ ಇಂತಹ ಕೌಟುಂಬಿಕ ದೌರ್ಜನ್ಯಗಳ ಪ್ರಮಾಣದಲ್ಲಿ ಈಗಾಗಲೇ ಏರಿಕೆಯಾಗಿದೆ.
ಕೊರೊನೊ ವೈರಸ್ ಲಾಕ್ಡೌನ್ ನಿಂದಾಗಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯದಲ್ಲಿ ಹೆಚ್ಚಳವಾಗುತ್ತದೆ ಎಂಬುದನ್ನು ಮುಂಚೆಯೇ ಊಹಿಸಲಾಗಿತ್ತು ಎಂಬುದು ಸಾಮಾಜಿಕ ಕಾರ್ಯಕರ್ತರ ಅಭಿಪ್ರಾಯ. ಯುದ್ಧಗಳ ಸಂದರ್ಭವಿರಲಿ, ಆರ್ಥಿಕ ಬಿಕ್ಕಟ್ಟಿನ ಸ್ಥಿತಿಯಿರಲಿ ಅಥವಾ ಸಾಂಕ್ರಾಮಿಕ ರೋಗಗಳು ಹಬ್ಬುವ ಸಂದರ್ಭವಿರಲಿ, ಇಂತಹ ಹಲವಾರು ತುರ್ತು ಪರಿಸ್ಥಿತಿಗಳಲ್ಲಿ ಶೋಷಣೆ, ದೌರ್ಜನ್ಯಗಳು ಹೆಚ್ಚಳವಾಗುವ ಸನ್ನಿವೇಶ ಮರುಕಳಿಸುತ್ತಲೇ ಇರುವುನ್ನು ಕಾಣುತ್ತೇವೆ.
“ಎಲ್ಲಾ ಬಿಕ್ಕಟ್ಟಿನ ಸನ್ನಿವೇಶಗಳಲ್ಲಿ ಹೀಗಾಗುತ್ತದೆ” ಎಂದೆನ್ನುವ ಮಾರ್ಸಿ ಹೆರ್ಶ್ ಅವರು “ನಮಗೆ ಆತಂಕವಾಗುತ್ತಿರುವುದೇನೆಂದರೆ ಈ ಹಿಂಸಾ ಪ್ರಕರಣಗಳ ದರ ಏರುತ್ತಿದ್ದಂತೆ ಮಹಿಳೆಯರಿಗೆ ಬೇಕಾದ ಸೇವೆಗಳು ಮತ್ತು ಅವನ್ನು ಪಡೆಯುವ ಅವರ ಸಾಮರ್ಥ್ಯ ತಗ್ಗುವುದನ್ನು ಕಾಣುತ್ತೇವೆ. ಇದೇ ದೊಡ್ಡ ಸವಾಲು” ಎನ್ನುತ್ತಾರೆ. ಮಾರ್ಸಿ ಅವರು ವಿಮೆನ್ ಡೆಲಿವರ್ ಎಂಬ ಸಂಸ್ಥೆಯಲ್ಲಿ ಮಾನವೀಯತಾ ಪ್ರತಿಪಾದನಾ ಹಿರಿಯ ನಿರ್ವಾಹಕಿಯಾಗಿದ್ದಾರೆ.
ಕ್ವಾರಂಟೈನ್ ಸಮಯದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ತೊಂದರೆ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಕುರಿತು ಸೂಕ್ತ ಕಾನೂನು ನಿರೂಪಣೆ ಅಥವಾ ನೀತಿ ನಿರೂಪಣೆ ಕುರಿತು ಒತ್ತಾಯಗಳೂ ಹಲವು ದೇಶಗಳಲ್ಲಿ ಕೇಳಿ ಬಂದಿವೆ.
ಮಹಿಳೆಯರ ಮೇಲೆ ದೌರ್ಜನ್ಯ ನಡೆಯುವ ವಿಷಯದಲ್ಲಿ ದೇಶದಲ್ಲೇ ಅತಿಹೆಚ್ಚು ಪ್ರಕರಣಗಳು ದಾಖಲಾದ ರಾಜ್ಯಗಳಲ್ಲಿ ಒಂದಾಗಿರುವ ಉತ್ತರ ಪ್ರದೇಶ ರಾಜ್ಯದ ಪೊಲೀಸರು ಕೌಟುಂಬಿಕ ಹಿಂಸೆ ಸಹಾಯವಾಣಿಯನ್ನು ಆರಂಭಿಸಿದ್ದಾರೆ. ಕೆಲಸ ಮಾಡುವ ಜಾಗಗಳಲ್ಲಿ ಈಗ ಕಿರುಕುಳಗಳೂ ಇಲ್ಲ, ಕಳವು ಪ್ರಕಣಗಳೂ ಇಲ್ಲ. ಯಾಕೆಂದರೆ ಅಲ್ಲಿ ಈಗ ಯಾರೂ ಇಲ್ಲ. ಆದರೆ, ಪರಸ್ಪರ ಕಾಣದ ಜಾಗದಲ್ಲಿ ಕುಳಿತು ಕೆಲಸ ಮಾಡುವಾಗ ಸಹೋದ್ಯೋಗಿಗಳ ನಡುವೆ ಆನ್ಲೈನ್ ಮುಖೇನವಾಗಿ ಕಿರುಕುಳ ನಡೆಯುವ ಪ್ರಕರಣಗಳು ಹೆಚ್ಚಬಹುದು. ಯಾಕೆಂದರೆ ಈ ಸಮಯದಲ್ಲಿ ಪರಸ್ಪರರ ನಡುವೆ ಹೆಚ್ಚಿನ ಆನ್ಲೈನ್ ಒಡನಾಟವಿರುವುದರಿಂದ ಕಿರುಕುಳಗಳಿಗೆ ಅಲ್ಲೇ ಹೆಚ್ಚು ಅವಕಾಶವಾಗುತ್ತದೆ.
ಆದರೆ ಇಂದು ಚಾಟ್ ತಂತ್ರಜ್ಞಾನಗಳು ಆನ್ಲೈನ್ ಕಿರುಕುಳಗಳನ್ನು ಗುರುತಿಸಿ ದಾಖಲಿಸುತ್ತಿದ್ದು, ಕಿರುಕುಳ ನಡೆಸಿದವರನ್ನು ಸಾಕ್ಷಿ ಸಮೇತ ಹಿಡಿದಿರುವ ಉದಾಹರಣೆಗಳಿವೆ.
ಲಾಕ್ಡೌನ್ ನಡುವೆ ಬಾಗಿಲು ಹಾಕಿದ ಪಾರ್ಕ್ಗಳು ಮತ್ತು ಗಾರ್ಡನ್ಗಳಲ್ಲಿಯೂ ಸಮಾಜ ವಿರೋಧಿ ವರ್ತನೆ ತೋರುವ ಪ್ರಕರಣಗಳು ಕಾಣುತ್ತಿಲ್ಲ. ಕೊರೊನಾ ವೈರಸ್ ಲಾಕ್ಡೌನ್ಗಳು ಊಹಿಸಲು ಸಾಧ್ಯವಾಗದ ಪರಿಣಾಮಗಳನ್ನು ಉಂಟುಮಾಡುತ್ತಿವೆ. ಅಪರಾಧಗಳ ಮೇಲೂ ಇವು ತಮ್ಮದೇ ರೀತಿಯ ಪರಿಣಾಮ ಬೀರುತ್ತಿವೆ. ಈಗ ಯಾರಾದರೂ ಕೊರೊನೊ ವೈರಸ್ ಪೀಡಿತರು ದುರುದ್ದೇಶದಿಂದ ಕೆಮ್ಮಿದರೂ ಅದು ಅಪರಾಧವೆನಿಸಿಕೊಳ್ಳುತ್ತದೆ. ಸಾರ್ವಜನಿಕರನ್ನು, ಪೊಲೀಸ್ ಮತ್ತು ವೈದ್ಯಕೀಯ ಸಿಬ್ಬಂದಿಗಳನ್ನು ಗುರಿಪಡಿಸಿಕೊಂಡು ಇಂತಹ ಕೃತ್ಯವೆಸಗುವ ಪ್ರಕರಣಗಳು ಕಂಡುಬಂದಿವೆ.
ಕೋವಿಡ್-19 ಎಂಬ ಈ ಜಾಗತಿಕ ಸೋಂಕು ರೋಗವು ಪ್ರಪಂಚದೆಲ್ಲೆಡೆ ಯಾರಿಗೆ ಬೇಕಾದರೂ ಹರಡುವ ಸಂಭವವಿರುವ ಹಿನ್ನೆಲೆಯಲ್ಲಿ ಪರಿಣಿತರು ನೀಡಿರುವ ಸೂಚನೆಯಂತೆ ಜನರು ಸಮುದಾಯ ಬಂಧಗಳನ್ನು- ಆರು ಅಡಿ ಅಂತರದಿಂದ ಕಾಪಾಡಿಕೊಳ್ಳತಕ್ಕದ್ದು. ಈ ಕಿವಿಮಾತು ಕೊರೊನಾ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡವರಂತೂ ಅವಶ್ಯವಾಗಿ ಪಾಲಿಸಬೇಕಾದುದು.
ಸರ್ಕಾರಗಳು, ಸಂಸ್ಥೆಗಳು ಜನರಿಗೆ ಜಾಗೃತಿ ಮೂಡಿಸಲು ಶ್ರಮಿಸುತ್ತಿರುವ ಹೊತ್ತಿನಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಬಂಧುಮಿತ್ರರಿಗೆ, ನೆರೆಹೊರೆಯವರಿಗೆ ಅರಿವು ಮೂಡಿಸುವುದು ಅತ್ಯವಶ್ಯವಾಗಿದೆ.