ಕರ್ನಾಟಕ

karnataka

ETV Bharat / bharat

ರಾಷ್ಟ್ರ ರಾಜಧಾನಿಯಲ್ಲಿ ಕೇವಲ 450 ರೂ. ವೆಚ್ಚದಲ್ಲಿ ಕೋವಿಡ್ -19 ಪರೀಕ್ಷೆ!

ಕಿಲ್ಲರ್​ ಕೊರೊನಾ ಸಮಸ್ಯೆಯನ್ನು ರಾಜಕೀಯಗೊಳಿಸುವ ಬದಲು ನಾವು ಅದರ ವಿರುದ್ಧ ಹೋರಾಡಲು ಮುಂದಾಗಬೇಕು ಎಂದಿರುವ ಆಪ್​ ಮುಖಂಡ ಸಂಜಯ್ ಸಿಂಗ್, ದೆಹಲಿಯ ಜನರಿಗಾಗಿ ಒಂದು ಶುಭ ಸುದ್ದಿ ನೀಡಿದ್ದಾರೆ.

Covid-19 tests in Delhi to cost Rs 450, says AAP leader Sanjay Singh
ಈಟಿವಿ ಭಾರತದ ಜೊತೆ ಮಾತನಾಡುತ್ತಿರುವ ಆಪ್​ ಮುಖಂಡ ಸಂಜಯ್ ಸಿಂಗ್

By

Published : Jun 15, 2020, 6:39 PM IST

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಶೀಘ್ರದಲ್ಲೇ ಕೇವಲ 450 ರೂ. ವೆಚ್ಚದಲ್ಲಿ ಕೋವಿಡ್ -19 ಪರೀಕ್ಷೆಯನ್ನು ಮಾಡಿಸಿಕೊಳ್ಳುವ ಯೋಜನೆಯೊಂದನ್ನು ಜಾರಿಗೆ ತರಲಾಗುತ್ತದೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಸಂಜಯ್ ಸಿಂಗ್ ತಿಳಿಸಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಕೇವಲ 450 ರೂ. ವೆಚ್ಚದಲ್ಲಿ ಕೋವಿಡ್ -19 ಪರೀಕ್ಷೆ

ಗೃಹ ಸಚಿವ ಅಮಿತ್ ಶಾ ಅವರು ನವದೆಹಲಿಯಲ್ಲಿನ ಕೋವಿಡ್ -19 ಪರಿಸ್ಥಿತಿ ಕುರಿತು ಚರ್ಚೆ ಮಾಡಲು ಕರೆದಿದ್ದ ಸರ್ವಪಕ್ಷ ಸಭೆಯ ನಂತರ ಈಟಿವಿ ಭಾರತದ ಜೊತೆ ಮಾತನಾಡಿದ ಅವರು, ರಾಜಧಾನಿಯಲ್ಲಿ ಶೀಘ್ರದಲ್ಲೇ 450 ರೂ.ಗಳ ವೆಚ್ಚದಲ್ಲಿ ಕೋವಿಡ್ -19 ಪರೀಕ್ಷೆಯನ್ನು ಮಾಡಿಸಿಕೊಳ್ಳುವ ಯೋಜನೆಯನ್ನು ಜಾರಿಗೆ ತರಲಾಗುವುದು. ಈ ಪರೀಕ್ಷೆ ಕೇವಲ 15 ನಿಮಿಷದ್ದಾಗಿರುತ್ತದೆ ಎಂದಿದ್ದಾರೆ.

ಕೊರೊನಾ ಹೆಚ್ಚಾಗಿ ಹಬ್ಬುತ್ತಿರುವುದರ ನಡುವೆ ನಗರದಲ್ಲಿ ಹೆಚ್ಚು ಹೆಚ್ಚು ಟೆಸ್ಟ್​ಗಳನ್ನು ಮಾಡುವ ಪ್ರಯತ್ನ ನಡೆದಿದೆ. ಜೂ. 20 ರೊಳಗೆ 18,000 ಪರೀಕ್ಷೆಗಳನ್ನು ಮಾಡಿ ಮುಗಿಸುವ ಗುರಿಯನ್ನು ಹೊಂದಿರುವುದಾಗಿ ಸಂಜಯ್ ಸಿಂಗ್​ ತಿಳಿಸಿದರು.

ಈಟಿವಿ ಭಾರತದ ಜೊತೆ ಮಾತನಾಡುತ್ತಿರುವ ಆಪ್​ ಮುಖಂಡ ಸಂಜಯ್ ಸಿಂಗ್

ತಮಿಳುನಾಡಿನ ನಂತರ, ಅತಿ ಹೆಚ್ಚು COVID-19 ಪರೀಕ್ಷೆಗಳನ್ನು ನಡೆಸುವ ಏಕೈಕ ರಾಜ್ಯ ದೆಹಲಿಯಾಗಿದೆ. ಆಸ್ಪತ್ರೆಯಲ್ಲಿ ಹಾಸಿಗೆಗಳ ವ್ಯವಸ್ಥೆ ಮಾಡುವುದರಲ್ಲಿ ದೆಹಲಿ ಮುಂದಿದೆ. ಆಸ್ಪತ್ರೆಯ ಹಾಸಿಗೆಗಳಲ್ಲಿ ಶೇ. 46 ರಷ್ಟು ಖಾಲಿ ಇದೆ ಎಂದು ರಾಷ್ಟ್ರ ರಾಜಧಾನಿಯಲ್ಲಿನ ಪರಿಸ್ಥಿತಿ ಕುರಿತು ಮಾಹಿತಿ ನೀಡಿದರು.

ABOUT THE AUTHOR

...view details