ಮುಂಬೈ(ಮಹಾರಾಷ್ಟ್ರ): ನಿರ್ಮಾಪಕ ಕರೀಮ್ ಮೊರಾನಿ ಅವರ ಪುತ್ರಿ ನಟಿ ಜೊವಾ ಮೊರಾನಿ ಅವರು ಮುಂಬೈನ ನಾಯರ್ ಆಸ್ಪತ್ರೆಯಲ್ಲಿ ಇಂದು ಕೊರೊನಾ ವೈರಸ್ ಸಂಶೋಧನೆ ಮತ್ತು ಚಿಕಿತ್ಸೆಗೆ ಎರಡನೇ ಬಾರಿ ತನ್ನ ಪ್ಲಾಸ್ಮಾ ದಾನ ಮಾಡಿದ್ದಾರೆ.
ಈ ತಿಂಗಳ ಆರಂಭದಲ್ಲಿ ಕೊರೊನಾ ವೈರಸ್ನಿಂದ ಚೇತರಿಸಿಕೊಂಡ ಜೊವಾ, ತಾನು ಚಿಕಿತ್ಸೆ ಪಡೆದ ಆಸ್ಪತ್ರೆಯಲ್ಲಿಯೇ ಕೋವಿಡ್-19ರ ಚಿಕಿತ್ಸೆಗಾಗಿ ಹಾಗೂ ಪ್ಲಾಸ್ಮಾಥೆರಪಿ ಪ್ರಯೋಗಗಳಿಗಾಗಿ ತನ್ನ ರಕ್ತದಾನ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಜೊವಾ, 2ನೇ ಸುತ್ತಿನ ಪ್ಲಾಸ್ಮಾ ದಾನ ಇದಾಗಿದ್ದು, ಹಿಂದಿನ ಬಾರಿ ಪ್ಲಸ್ಮಾ ದಾನ ಮಾಡಿದ್ದರಿಂದ ಒಬ್ಬ ರೋಗಿ ಐಸಿಯುನಿಂದ ಹೊರಬರಲು ಸಾಧ್ಯವಾಯಿತು. ಹೀಗೆ ಆದಷ್ಟು ಬೇಗ ಎಲ್ಲಾ ಕೊರೊನಾ ಸೋಂಕಿತರು ಗುಣಮುಖರಾಗಲಿ ಹಾಗೂ ತದನಂತರ ನೀವು ಸಹ ಪ್ಲಾಸ್ಮಾ ದಾನ ಮಾಡಿ. ಅದು ಇನ್ನೋರ್ವರಿಗೆ ಸಹಾಯವಾಗುತ್ತದೆ ಎಂದು ಬರೆದುಕೊಂಡಿದ್ದಾರೆ.
ಜೋವಾಳ ಸಹೋದರಿ ಶಾಜಾ ಮತ್ತು ಅವರ ತಂದೆ ಕರೀಮ್ ಮೊರಾನಿ ಈ ಇಬ್ಬರಲ್ಲಿಯೂ ಸಹ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು.