ನವದೆಹಲಿ:ಕೊರೊನಾ ಸಾಂಕ್ರಾಮಿಕ ರೋಗವು ಭಾರತಕ್ಕೆ ಕಲಿಸಿದ ಅತಿದೊಡ್ಡ ಪಾಠವೆಂದರೆ ಸ್ವಾವಲಂಬಿಗಳಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕರ್ನಾಟಕ ಮೂಲದ ಗ್ರಾಮ ಪಂ. ಸದಸ್ಯನೊಂದಿಗೆ ಮೋದಿ ಸಂವಾದ ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಅಂಗವಾಗಿ ಗ್ರಾಮ ಪಂಚಾಯತ್ ಸದಸ್ಯರೊಂದಿಗೆ ವಿಡಿಯೋ ಸಂವಾದ ನಡೆಸಿದ ಮೋದಿ, ಕೋವಿಡ್-19 ನಮಗೆ ಕಲಿಸಿದ ಅತಿದೊಡ್ಡ ಪಾಠವೆಂದರೆ ಸ್ವಾವಲಂಬಿಗಳಾಗುವುದು ಎಂದಿದ್ದಾರೆ. ಹಳ್ಳಿಗಳು ಸಹ ತಮ್ಮ ಮೂಲಭೂತ ಅಗತ್ಯಗಳಿಗಾಗಿ ಸ್ವಾವಲಂಬಿಗಳಾಗುವುದು ಈಗ ಕಡ್ಡಾಯವಾಗಿದೆ ಎಂದಿದ್ದಾರೆ.
ಕೊರೊನಾ ವೈರಸ್ ಸಾಂಕ್ರಾಮಿಕ ದೇಶವು ಹಿಂದೆಂದೂ ಎದುರಿಸದ ಹೊಸ ಸವಾಲುಗಳನ್ನು ಸೃಷ್ಟಿಸಿದೆ. ಆದರೆ, ಜನರು ಹೊಸ ವಿಷಯಗಳನ್ನು ಕಲಿಯುವಂತೆ ಮಾಡಿದೆ ಎಂದಿದ್ದಾರೆ. ಇದೇ ವೇಳೆ ಲಾಕ್‌ಡೌನ್ ನಿಯಮಗಳನ್ನು ಪಾಲಿಸಿದ್ದಕ್ಕಾಗಿ ಜನರನ್ನು ಶ್ಲಾಘಿಸಿದರು. ಇದರ ಪರಿಣಾಮವಾಗಿಯೇ ಕೊರೊನಾ ಬಿಕ್ಕಟ್ಟಿಗೆ ಭಾರತ ಹೇಗೆ ಪ್ರತಿಕ್ರಿಯಿಸಿದೆ ಎಂಬುದರ ಕುರಿತು ಇಡೀ ಜಗತ್ತು ಮಾತನಾಡುತ್ತಿದೆ ಎಂದಿದ್ದಾರೆ.
ಕೊರೊನಾ ಬಿಕ್ಕಟ್ಟಿನ ಮಧ್ಯೆ ಸೀಮಿತ ಸಂಪನ್ಮೂಲಗಳನ್ನು ಹೊಂದಿದ್ದರೂ ಜನರು ತೊಂದರೆಗೆ ಸಿಲುಕುವ ಬದಲು ಸವಾಲನ್ನು ಸ್ವೀಕರಿಸಿದ್ದಾರೆ ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಇ-ಗ್ರಾಮ್ ಸ್ವರಾಜ್ ಎಂಬ ಪೋರ್ಟಲ್ ಮತ್ತು ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದರು.